ಉಡುಪಿ: ಉಡುಪಿಯ ಹಾವಂಜೆ ಗ್ರಾಮದ ಅಂಗಡಿಬೆಟ್ಟುವಿನಿಂದ ಹಾವಂಜೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂರ್ಪಕ ಕಲ್ಪಿಸುವ ಸಾರ್ವಜನಿಕ ರಸ್ತೆಯಲ್ಲಿ ಸ್ಥಳೀಯರಿಬ್ಬರು ಅಪಾಯಕಾರಿ ಗುಂಡಿ ತೋಡಿದ್ದಾರೆ. ಅಲ್ಲದೆ ಮರದ ತುಂಡು ಅಡ್ಡಹಾಕಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ. ಈ ಪ್ರಕರಣಕ್ಕೆ ಒಂದು ವರ್ಷ ಕಳೆಯುತ್ತಾ ಬಂದಿದ್ದರೂ ಸಮಸ್ಯೆ ಹಾಗೇ ಇದೆ.
ಹಲವು ಬಾರಿ ಈ ಬಗ್ಗೆ ಜಿಲ್ಲಾಡಳಿತಕ್ಕೆ ದೂರು ನೀಡಿದ್ದರೂ ಅಧಿಕಾರಿಗಳು ಇತ್ತ ಗಮನ ಹರಿಸದಿರುವುದು ವಿಪರ್ಯಾಸ.ಇತ್ತೀಚೆಗೆ ಈ ರಸ್ತೆ ವಿಷಯವಾಗಿ ಸ್ಥಳೀಯ ವ್ಯಕ್ತಿ ತಮ್ಮ ಅಪ್ಪನ ಜೊತೆ ಜಗಳ ಮಾಡಿದ್ದಲ್ಲದೆ ,ಅಪ್ಪನಿಗೆ ಥಳಿಸಿದ್ದಾಗಿ ಆರೋಪಿಸಿದ್ದಾರೆ. ತಮ್ಮ ತಾಯಿ ಅನಾರೋಗ್ಯದಿಂದಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲೂ ಸಮಸ್ಯೆಯಾಗುತ್ತಿದೆ. ಸ್ಥಳದಲ್ಲಿ ಈ ವ್ಯಕ್ತಿಯು ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ
ಸ್ಥಳೀಯ ಆಡಳಿತ ಕೂಡಲೇ ಇತ್ತ ಗಮನ ಹರಿಸಿ ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿ ಕೊಡಬೇಕಾಗಿ ಇಲ್ಲಿನ ನಿವಾಸಿ ಸಚಿನ್ ಕೊಳಲಗಿರಿ ಆಗ್ರಹಿಸಿದ್ದಾರೆ.
Kshetra Samachara
10/09/2022 09:58 pm