ಮುಲ್ಕಿ: ಗೆಳೆಯರ ಮತ್ತು ಗೆಳತಿಯರ ಬಳಗ ಕಳೆದ 20 ವ ವರ್ಷದಿಂದ ಊರ, ಪರವೂರ ಮಹನೀಯರ ಸಹಕಾರದಿಂದ ದೇವಳಕ್ಕೆ ಅಗತ್ಯವಿರುವ ವಸ್ತು ಕೊಡುಗೆ ನೀಡಿದೆ.
ಈ ಸಂದರ್ಭ ಕೊರೊನಾದಿಂದಾಗಿ ಎಲ್ಲರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ಕಾರಣ
ಕೇಂದ್ರ, ರಾಜ್ಯ ಸರಕಾರಗಳ ಸಹಭಾಗಿತ್ವದಲ್ಲಿ ಜಾರಿಗೆ ಬಂದಿರುವ ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಸೇವೆಯನ್ನು ಪ್ರತಿ ಗ್ರಾಮಸ್ಥರು ಪಡೆಯಬೇಕೆನ್ನುವ ದೃಷ್ಟಿಯಿಂದ ಈ ಗುರುತಿನ ಚೀಟಿ ಉಚಿತವಾಗಿ ವಿತರಿಸುವ ಕಾರ್ಯಕ್ರಮ ಆಯೋಜಿಸಿದ್ದು ಶ್ಲಾಘನೀಯ ಎಂದು ಪುನರೂರು ಪ್ರತಿಷ್ಠಾನ ಅಧ್ಯಕ್ಷ ದೇವಪ್ರಸಾದ್ ಪುನರೂರು ಹೇಳಿದರು.
ಗೆಳೆಯರ ಬಳಗ ಮತ್ತು ಗೆಳತಿಯರ ಬಳಗ ದೇಂದಡ್ಕ, ಪುತ್ತೂರು ಆಶ್ರಯದಲ್ಲಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಸೇವಾ ಚಾರಿಟೇಬಲ್ ಟ್ರಸ್ಟ್ ಹಾಗೂ ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ಮುಲ್ಕಿ ಸಹಕಾರದಲ್ಲಿ ಕರ್ನಾಟಕ ಒನ್ ಸಹಯೋಗದೊಂದಿಗೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ದೇಂದಡ್ಕ,ಪುತ್ತೂರಿನಲ್ಲಿ ಆರೋಗ್ಯ ಕರ್ನಾಟಕ ಆಯುಷ್ಮಾನ್ ಭಾರತ ಉಚಿತ ಗುರುತಿನ ಚೀಟಿ ವಿತರಣೆ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ದೇವಳದ ಪ್ರಧಾನ ಅರ್ಚಕ ವೇ.ಮೂ. ಸುಬ್ರಹ್ಮಣ್ಯ ಭಟ್ ಉದ್ಘಾಟಿಸಿದರು. ಹಿರಿಯರಾದ ರಾಮದಾಸ್ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಲಯನ್ಸ್ ಮತ್ತು ಲಿಯೋ ಕ್ಲಬ್ ಮುಲ್ಕಿಯ ಅಧ್ಯಕ್ಷರುಗಳಾದ ಪ್ರತಿಭಾ ಹೆಬ್ಬಾರ್, ಶಿವಾನಿ ಹೆಬ್ಬಾರ್, ಗೆಳೆಯರ ಮತ್ತು ಗೆಳತಿಯರ ಬಳಗದ ಅಧ್ಯಕ್ಷರಾದ ಗುರುರಾಜ್ ಭಟ್,ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಸೇವಾ ಚಾರಿಟೇಬಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಶೆಟ್ಟಿ, ಕೋಶಾಧಿಕಾರಿ ಪಾಂಡುರಂಗ ಕಾಮತ್ ಮತ್ತು ಲಯನ್ಸ್ ಕ್ಲಬ್ ಮುಲ್ಕಿಯ ಮಾಜಿ ಅಧ್ಯಕ್ಷರಾದ ವೆಂಕಟೇಶ್
ಹೆಬ್ಬಾರ್ ಉಪಸ್ಥಿತರಿದ್ದರು. ಪ್ರಾಣೇಶ್ ಭಟ್ ದೇಂದಡ್ಕ ನಿರೂಪಿಸಿದರು. ಶಿಬಿರದಲ್ಲಿ 274 ಫಲಾನುಭವಿಗಳಿಗೆ ಆರೋಗ್ಯ ಗುರುತಿನ ಚೀಟಿ ಉಚಿತವಾಗಿ ವಿತರಿಸಲಾಯಿತು.
Kshetra Samachara
15/11/2020 02:49 pm