ಉಡುಪಿ: ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಉಡುಪಿ ಈ ಸಂಸ್ಥೆಯು ಜಿಲ್ಲೆಯಾದ್ಯಂತ ನೆಲೆಸಿರುವ ಕ್ಷೌರಿಕರ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ. ಸದ್ಯ ಉಡುಪಿ, ಕಾರ್ಕಳ ,ಕುಂದಾಪುರದಲ್ಲಿ ಶಾಖೆ ಹೊಂದಿರುವ ಸಂಸ್ಥೆ, ಸಮಾಜ ಬಾಂಧವರ ಆರ್ಥಿಕ, ಸಾಮಾಜಿಕ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಕಳೆದ ಎಂಟು ವರ್ಷಗಳಿಂದ ಸಂಸ್ಥೆ ಲಾಭದಲ್ಲಿದ್ದು, ಲಾಭದ ಪಾಲನ್ನು ಕ್ಷೌರಿಕ ವೃತ್ತಿಬಾಂಧವರಿಗೆ ನೀಡಲಾಗಿದೆ ಎಂದು ಸವಿತಾ ಸಮಾಜದ ಮುಖಂಡರು ಹೇಳಿದ್ದಾರೆ.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿ ಯಲ್ಲಿ ಮಾಹಿತಿ ನೀಡಿದ ಮುಖಂಡರು, ಕೊರೊನಾ ಸಂಕಷ್ಟದ ಸಮಯದಲ್ಲಿ ಸವಿತಾ ಸಮಾಜದ ಸದಸ್ಯರಿಗೆ ಅನುಕೂಲವಾಗುವಂತೆ 800ಕ್ಕೂ ಹೆಚ್ಚು ಉಚಿತ ಸೆಲೂನ್ ಕಿಟ್ ಸುಮಾರು ನಾಲ್ಕು ಲಕ್ಷ ರೂ. ವೆಚ್ಚದಲ್ಲಿ ನೀಡಲಾಗಿದೆ. ಸಾಮಗ್ರಿ ಮಳಿಗೆಯಲ್ಲಿ ನಿರಂತರ ವ್ಯವಹಾರ ನಡೆಸುತ್ತಿರುವ ಸದಸ್ಯರ ವೈಯಕ್ತಿಕ ಸಾಲದ ಬಡ್ಡಿ ಮನ್ನಾ ಮಾಡಲಾಗಿದೆ. ಸದಸ್ಯರ ಸಾಲ ಮರುಪಾವತಿ ಅವಧಿ ವಿಸ್ತರಿಸಲಾಗಿದೆ ಹಾಗೂ ಬಡ್ಡಿದರದಲ್ಲಿ ಶೇ. 2 ರಷ್ಟು ಕಡಿತಗೊಳಿಸಲಾಗಿದೆ. ಇದಲ್ಲದೆ ಸವಿತಾ ಹಿರಿಯ ನಾಗರಿಕ ವೇತನ, ಸವಿತಾ ಆರೋಗ್ಯಶ್ರೀ, ಸವಿತಾ ಆರೋಗ್ಯ ಸಾಲ ಇತ್ಯಾದಿ ಯೋಜನೆಗಳನ್ನು ಸಹಕಾರಿ ಸದಸ್ಯರಿಗಾಗಿ ರೂಪಿಸಲಾಗಿದೆ ಎಂದು ಸವಿತಾ ಸಮಾಜದ ಮುಖಂಡರು ಮಾಹಿತಿ ನೀಡಿದರು.
Kshetra Samachara
06/11/2020 03:12 pm