ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಅ.11 ರಿಂದ‌ 1 ಲೀಟರ್ ಹಾಲಿಗೆ ಕನಿಷ್ಠ ದರ 32 ರೂ.: ದ.ಕ. ಹಾಲು ಉತ್ಪಾದಕರ ಒಕ್ಕೂಟ ನಿರ್ಧಾರ

ಮಂಗಳೂರು: ರೈತರನ್ನು ಉತ್ತೇಜಿಸುವ ನಿಟ್ಟಿನಲ್ಲಿ ದ.ಕ. ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಅ.11 ರಿಂದ ಒಂದು ಲೀಟರ್ ಹಾಲಿಗೆ ಕನಿಷ್ಠ ದರ 32 ರೂ. ನೀಡುವ ನಿರ್ಧಾರವನ್ನು ಕೈಗೊಂಡಿದೆ.

ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತದ ಅಧ್ಯಕ್ಷ ಸುಚರಿತ ಶೆಟ್ಟಿಯವರು ಮಾತನಾಡಿ, ಸರಕಾರದ ಮಾನದಂಡದಂತೆ 3.5 ಫ್ಯಾಟ್ ಹಾಗೂ 8.5 ಎಸ್ಎಸ್ಎಫ್ ಇರುವ ಹಾಲಿಗೆ ಈಗಾಗಲೇ 29.95 ರೂ. ಕೊಡಲಾಗುತ್ತಿತ್ತು. ಅ.11 ರಿಂದ ಇದಕ್ಕೆ 2.05 ರೂ‌. ಸೇರಿಸಿ‌ ರೈತರಿಗೆ ಪ್ರೋತ್ಸಾಹ ಧನದ ರೀತಿಯಲ್ಲಿ 32 ರೂ‌. ಮಾಡಲಾಗುತ್ತದೆ. ಆದರೆ ಹಾಲಿನ ದರವನ್ನು ಹೆಚ್ಚಳ ಮಾಡುವ ಯಾವ ಉದ್ದೇಶವಿಲ್ಲ. ಒಕ್ಕೂಟದಲ್ಲಿರುವ ವ್ಯವಸ್ಥೆಯಿಂದಲೇ ಈ ಪ್ರೋತ್ಸಾಹ ಧನವನ್ನು ನೀಡುವ ಬಗ್ಗೆ ಆಡಳಿತ ಮಂಡಳಿ ನಿರ್ಧರಿಸಿದೆ ಎಂದರು.

ಇಷ್ಟರವರೆಗೆ ಹಾಲಿನ ದರವನ್ನು ಏರಿಕೆ ಮಾಡಿ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿತ್ತು. ಈ ಮೂಲಕ ಓರ್ವ ರೈತನಿಗೆ ಗುಣಮಟ್ಟದ ಹಾಲಿಗೆ ಲೀಟರ್ ಗೆ 33 ರೂ. ಬಿಡುಗಡೆ ಮಾಡಿದಂತಾಗುತ್ತದೆ. 5 ರೂ‌. ಸರಕಾರದ ಸಹಾಯ ಧನ ದೊರಕುತ್ತದೆ. ಮುಂದಕ್ಕೆ ಸರಕಾರ ಒಂದು ಲೀಟರ್‌ ಹಾಲಿಗೆ 3 ರೂ. ಹೆಚ್ಚಳ ಮಾಡುವ ಸಂದರ್ಭ ಲಾಭ ನಷ್ಟವನ್ನು ಗಮನಿಸಿ ಮತ್ತೆ ಪುನರ್ ಪರಿಶೀಲನೆ ಮಾಡಿದರ ಹೆಚ್ಚಳ ಮಾಡುವ ಬಗ್ಗೆ ದ.ಕ. ಹಾಲು ಉತ್ಪಾದಕರ ಒಕ್ಕೂಟ ಚಿಂತನೆ ಮಾಡುತ್ತದೆ ಎಂದು ಹೇಳಿದರು.

Edited By :
PublicNext

PublicNext

07/10/2022 07:16 pm

Cinque Terre

33.84 K

Cinque Terre

1

ಸಂಬಂಧಿತ ಸುದ್ದಿ