ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಅಪಾಯ ಆಹ್ವಾನಿಸುತ್ತಿದೆ ತಡೆಗೋಡೆಯಿಲ್ಲದ ಕಿರು ಸೇತುವೆ: ಮುಕ್ತಿ ಎಂದು?

ವರದಿ: ರಹೀಂ ಉಜಿರೆ

ಬ್ರಹ್ಮಾವರ : ಬಾರ್ಕೂರು, ಬಂಡೀಮಠ , ಕೂರಾಡಿ ಮೂಲಕ ಕೊಕ್ಕರ್ಣೆಯನ್ನು ಸಂಪರ್ಕಿಸುವ ರಸ್ತೆಯಲ್ಲಿ ತಡೆಗೋಡೆ ಇಲ್ಲದ ಕಿರುಸೇತುವೆ ಇದೆ.

ಇನ್ನು ನಿತ್ಯ ವಾಹನ ಸವಾರರಿಗೆ ಅಪಾಯವನ್ನು ಆಹ್ವಾನಿಸುತ್ತಿರುವ ಈ ಸೇತುವೆಗೆ ತಡೆಗೋಡೆಯೂ ಇಲ್ಲ.ಇಲ್ಲಿ ಹಲವು ಬಾರಿ ಅಪಘಾತಗಳಾಗಿವೆ.ಕಿರು ಸೇತುವೆಗೆ ಹಲವು ವಾಹನಗಳು ಬಿದ್ದ ಉದಾಹರಣೆಗಳಿವೆ.

ಇತ್ತೀಚೆಗಷ್ಟೆ ಮಣ್ಣು ತುಂಬಿದ ಟೆಂಪೋವೊಂದು ಬಿದ್ದು ಚಾಲಕ ಬಾರೀ ಅಪಾಯದಿಂದ ಪಾರಾಗಿದ್ದಾರೆ.ಅಪಾಯಕಾರಿ ತಿರುವಿನಲ್ಲಿರುವ ಈ ಕಿರು ಸೇತುವೆ 50 ವರ್ಷ ಹಳೆಯದು. ಕುಸಿಯುವ ಭೀತಿಯಲ್ಲಿರುವ ಈ ಸೇತುವೆಗೆ ಸರಕಾರದಿಂದ ಹಣವೂ ಬಿಡುಗಡೆಯಾಗಿದೆ.

ಕಳೆದ ವರ್ಷ ಮೇ ತಿಂಗಳಲ್ಲಿ ಸೇತುವೆ ಕಾಮಗಾರಿ ಮುಗಿಯಬೇಕಿತ್ತು. ಆದರೆ ಗುತ್ತಿಗೆದಾರರು ಮಳೆಯ ನೆಪವೊಡ್ಡಿ ಕಾಮಗಾರಿ ಮಾಡಿಲ್ಲ. ಪ್ರತಿದಿನ ಶಾಲೆ ,ಕಾಲೇಜು ವಾಹನ ಮತ್ತು ಬಸ್ ಸಂಚಾರ ಇರುವ ಈ ರಸ್ತೆ ಕಾಮಗಾರಿಯನ್ನು ಕಳೆದ ವರ್ಷ ಮಾಡಿದ್ದರೂ, ಸೇತುವೆ ಕಾಮಗಾರಿ ಮಾಡದೇ ಜನರಿಗೆ ತೀರಾ ತೊಂದರೆಯಾಗಿದೆ.

ತಿರುವಿನಲ್ಲಿರುವ ಈ ಪುರಾತನ, ಕಿರಿದಾದ ಸೇತುವೆಯನ್ನು ಅಗಲೀಕರಣ ಮಾಡಿ ಜನರಿಗೆ ಉಪಯುಕ್ತವಾಗುವಂತೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Edited By : Shivu K
Kshetra Samachara

Kshetra Samachara

25/02/2022 08:06 am

Cinque Terre

16.3 K

Cinque Terre

0

ಸಂಬಂಧಿತ ಸುದ್ದಿ