ಮಲ್ಪೆ- ಉಡುಪಿ ಜಿಲ್ಲೆ ಮಲ್ಪೆ ಕಡಲ ತೀರ ಇನ್ಮುಂದೆ ಮತ್ತಷ್ಟು ಸುಂದರ. ಕಾರಣ, ಅಲ್ಲಿ ಈಗ ನಯನ ಮನೋಹರ ಉದ್ಯಾನ ತಲೆ ಎತ್ತಲಿದೆ. ಅದಕ್ಕಾಗಿ ದೊಡ್ಡ ಗಾತ್ರದ ಆಕರ್ಷಕ ಮೂರ್ತಿಗಳು ಉದ್ಯಾನ ಆಭರಣದಲ್ಲಿ ತಲೆ ಎತ್ತಿ ನಿಲ್ಲುತ್ತಿವೆ. ಸುಮಾರು 2 ಕೋಟಿ ವೆಚ್ಚದಲ್ಲಿ ಈ ಉದ್ಯಾನ ಹಾಗೂ ಬಯಲು ರಂಗಮಂದಿರ ನಿರ್ಮಾಣವಾಗಲಿದೆ.
ಸುಮಾರು 600 ಮೀಟರ್ ಪ್ರದೇಶದಲ್ಲಿ ಸ್ಕೈವಾಕ್ ಉದ್ಯಾನ ನಿರ್ಮಿತವಾಗುತ್ತಿದೆ. ಯಕ್ಷಗಾನ ಕಲಾವಿದರ ಪ್ರತಿಮೆ, ಹಾಯಿದೋಣಿ, ಜಟಾಯು, ಹಾಗೂ ಕರಾವಳಿ ಜನಜೀವನ ಪ್ರತಿನಿಧಿಸುವ ಅನೇಕ ಸಿಮೆಂಟ್ ಪ್ರತಿಮೆಗಳು ಇಲ್ಲಿ ತಲೆ ಎತ್ತುತ್ತಿವೆ. ಅದರ ಜೊತೆಗೆ 200ರಿಂದ 250ಜನ ಕುಳಿತುಕೊಳ್ಳಬಹುದಾದ ಅರ್ಧ ಚಂದ್ರಾಕಾರದ ಬಯಲು ರಂಗ ಮಂದಿರ ನಿರ್ಮಾಣವಾಗಿತ್ತಿದೆ. ಜೊತೆಗೆ ವಿಹಾರಿಗಳಿಗೆ ಪಾರ್ಕಿಂಗ್ ವ್ಯವಸ್ಥೆ , ಮಕ್ಕಳಿ ಆಟಕ್ಕೆ ಜಾರುಬಂಡೆ ಹಾಗೂ ಬಯಲು ವ್ಯಾಯಮ ಪರಿಕರಗಳನ್ನು ಇಲ್ಲಿ ಅಳವಡಿಸಲಾಗುತ್ತದೆ. ಬರುವ ನವೆಂಬರ್ ತಿಂಗಳಲ್ಲಿ ಇದು ಉದ್ಘಾಟನೆ ಆಗುವ ನಿರೀಕ್ಷೆ ಇದೆ.
Kshetra Samachara
30/10/2020 02:22 pm