ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ಕೊರೋನಾ ಲಸಿಕೆಯಿಂದಾಗಿ ಕಾಣಿಸಿಕೊಂಡ ಕೈನೋವು: ಮನನೊಂದು ವ್ಯಕ್ತಿ ಆತ್ಮಹತ್ಯೆ

ಕಾರ್ಕಳ: ಕೊರೋನಾ ಲಸಿಕೆ ಹಾಕಿಸಿಕೊಂಡ ಬಳಿಕ ಕಾಣಿಸಿಕೊಂಡಿದ್ದ ಕೈ ನೋವಿನಿಂದ ಮನನೊಂದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೌಡೂರು ಗ್ರಾಮದ ತಡ್ಪೆದೋಟ ಎಂಬಲ್ಲಿ ಅ.10ರಂದು ಸಂಜೆ ಸಂಭವಿಸಿದೆ.ಕೌಡೂರು ಗ್ರಾಮದ ತಡ್ಪೆದೋಟ ನಿವಾಸಿ ಪ್ರದೀಪ್ ಪೂಜಾರಿ (37) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಇವರು ಕೆಲವರ್ಷಗಳಿಂದ ಮುಂಬೈ ಮತ್ತು ಪೂನಾದಲ್ಲಿ ಕೆಲಸ ಮಾಡಿಕೊಂಡಿದ್ದು, ಒಂದು ವರ್ಷದಿಂದ ಊರಿನಲ್ಲಿ ವಾಸವಾಗಿದ್ದಾರೆ. ಕಳೆದ ವರ್ಷ ಕೊರೋನಾ ಸಮಯದಲ್ಲಿ ಇವರ ಕೈಗೆ ಲಸಿಕೆ ನೀಡಿದ್ದು ಇದರಿಂದ ಕೈ ನೋವುಂಟಾಗಿ ಸರಿಯಾಗಿ ಕೆಲಸ ಮಾಡಲು ಆಗುತ್ತಿರಲಿಲ್ಲ. ಇದರಿಂದ ಮನನೊಂದ ಪ್ರದೀಪ್ ಪೂಜಾರಿ ಮನೆಯ ಸಮೀಪದ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : PublicNext Desk
PublicNext

PublicNext

11/10/2022 07:46 pm

Cinque Terre

12.3 K

Cinque Terre

2

ಸಂಬಂಧಿತ ಸುದ್ದಿ