ಮಲ್ಪೆ: ಕಳೆದೆರಡು ದಿನಗಳಿಂದ ಮಲ್ಪೆ ಬಂದರಿನಿಂದ ಸರಬರಾಜಾಗುವ ಮೀನಿನ ದರ ಭಾರೀ ಕುಸಿತಗೊಂಡಿದ್ದು ಮತ್ಸ್ಯಪ್ರಿಯರಲ್ಲಿ ಸಂತಸಕ್ಜೆ ಕಾರಣವಾಗಿದೆ.
ಮಲ್ಪೆ ಮಾತ್ರವಲ್ಲದೆ ಉಡುಪಿಯ ಪ್ರಮುಖ ಮೀನು ಮಾರುಕಟ್ಟೆಯಲ್ಲೂ ಮೀನಿನ ದರ ಭಾರೀ ಇಳಿದಿದೆ.ನಿನ್ನೆ ಮಲ್ಪೆಯಲ್ಲಿ ನೂರು ರುಪಾಯಿಗೆ ಜನರು ಐವತ್ತು ಬಂಗುಡೆ ಮೀನು ಕೊಂಡೊಯ್ದಿದ್ದಾರೆ.ಈ ಬಾರಿ ಬಂಗುಡೆ ಮೀನು ಸಾಕಷ್ಟು ಪ್ರಮಾಣದಲ್ಲಿ ಬಂದಿದೆ.
ಇನ್ನು ಬೂತಾಯಿ ಮೀನಿನ ದರ ಕೂಡ ಕಡಿಮೆ ಇದೆ.ಪ್ರತಿವರ್ಷ ನವರಾತ್ರಿ ಸಂದರ್ಭ ಮೀನಿನ ದರ ಕಡಿಮೆಯಾಗುತ್ತದೆ.ಇದಕ್ಕೆ ಕಾರಣ ,ನವರಾತ್ರಿ ಸಂದರ್ಭ ಬಹುತೇಕರು ಮಾಂಸಾಹಾರ ತ್ಯಜಿಸುತ್ತಾರೆ. ಆದರೆ ಈ ಬಾರಿ ನವರಾತ್ರಿಗೂ ನಾಲ್ಕು ದಿನ ಮೊದಲೇ ದರದಲ್ಲಿ ಭಾರೀ ಕುಸಿತವಾಗಿದೆ.ಇದು ಮತ್ಸ್ಯಪ್ರಿಯರ ಸಂತಸಕ್ಕೆ ಕಾರಣವಾಗಿದೆ.
Kshetra Samachara
23/09/2022 06:24 pm