ಸುಳ್ಯ : ಸರ್ಕಾರಿ ಬಸ್ಸೊಂದರಿಂದ ಬಿದ್ದು ಗಾಯಗೊಂಡ ಮುಸ್ಲಿಂ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ ಹಿಂದು ಜಾಗರಣ ವೇದಿಕೆ (ಹಿಂ.ಜಾ.ವೇ) ಕಾರ್ಯಕರ್ತನ ಬಗ್ಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಕೋಮು ಸೂಕ್ಷ್ಮ ಪ್ರದೇಶವಾಗಿರುವ ಸುಳ್ಯದ ಸಮೀಪ ಈ ಮಾನವೀಯ ಘಟನೆ ನಡೆದಿದೆ.
ಬೆಳ್ಳಾರೆಯಿಂದ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ನಿಂದ ಮಹಿಳೆ ಬಿದ್ದು ಕಾಲಿಗೆ ಗಂಭೀರ ಗಾಯಗೊಂಡ ಘಟನೆ ಇಂದು ಸೋಣಂಗೇರಿಯಲ್ಲಿ ನಡೆದಿದೆ.
ದುಗಲಡ್ಕದ ಕೊಳಂಜಿಕೋಡಿಯ ಅಬ್ದುಲ್ಲ ಎಂಬವರ ಪತ್ನಿ 60 ವರ್ಷದ ಮೈಮುನಾ ಎಂಬ ಮಹಿಳೆ ಬೆಳ್ಳಾರೆಯಿಂದ ಸುಳ್ಯಕ್ಕೆ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಬಂದು ಸೋಣಂಗೇರಿಯಲ್ಲಿ ಇಳಿಯಲಿದ್ದರು, ಆದರೆ ಬಸ್ ನಿಲ್ಲುವ ಮೊದಲೇ ಮಹಿಳೆ ಇಳಿದ ಕಾರಣ ಬಸ್ ನಿಂದ ಬಿದ್ದಿದ್ದು ಬಸ್ಸಿನ ಹಿಂದಿನ ಚಕ್ರ ಅವರ ಕಾಲಿನ ಮೇಲೆ ಹರಿದು ಕಾಲಿಗೆ ಗಂಭೀರ ಗಾಯವಾಗಿದೆ.
ತಕ್ಷಣ ಹಿಂಜಾವೇ ಕಾರ್ಯಕರ್ತ ಸಂತೋಷ್ ಕೊಡಿಯಾಲ ಮತ್ತಿತರರು ಸೇರಿ ಗಾಯಗೊಂಡ ಮಹಿಖೆಯನ್ನು ತಮ್ಮ ವಾಹನದಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
Kshetra Samachara
20/09/2022 04:38 pm