ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಬ್ರಿ: ಬಾಲಕಿಯ ಚಿಕಿತ್ಸೆಗಾಗಿ ವೇಷ ತೊಟ್ಟ ತಂಡ: ಯೂಟ್ಯೂಬರ್ ಮನವಿಗೆ ಹರಿದು ಬಂತು ಲಕ್ಷಾಂತರ ಹಣ!

ವರದಿ: ರಹೀಂ ಉಜಿರೆ

ಹೆಬ್ರಿ: ಉಡುಪಿಯಲ್ಲಿ ಕೆಲವು ಯುವಕರಿದ್ದಾರೆ. ಅಷ್ಠಮಿ ಸಂದರ್ಭ ವೇಷ ಹಾಕಿ ಹಣ ಸಂಗ್ರಹಿಸಿ ಅದನ್ನು ಬಡ ಮಕ್ಕಳ ಚಿಕಿತ್ಸೆಗೆ ವ್ಯಯಿಸುವ ಯುವಕರು ಇವರು. ರವಿ ಕಟಪಾಡಿ ಕಳೆದ ಏಳು ವರ್ಷಗಳಿಂದ ಲಕ್ಷಾಂತರ ರೂ ಹಣವನ್ನು ಈ ರೀತಿ ಸಾಮಾಜಿಕ ಕಾರ್ಯಕ್ಕೆ ವಿನಿಯೋಗಿಸುತ್ತಿದ್ದಾರೆ.

ಈ ವರ್ಷ ರವಿ ಕಟಪಾಡಿ ಮಾತ್ರವಲ್ಲದೇ, ಇಲ್ಲಿನ ಫೇಮಸ್ ಯೂಟ್ಯೂಬರ್ ಸಚಿನ್ ಶೆಟ್ಟಿ ತಮ್ಮ ತಂಡದ ಸದಸ್ಯರ ಜೊತೆ ವೇಷ ಹಾಕಿ ಅದರಿಂದ ಬಂದ ಹಣವನ್ನು ಬಾಲಕಿಯ ಚಿಕಿತ್ಸೆಗೆ ನೀಡಿ‌ ಮಾನವೀಯತೆ ಮೆರೆದಿದ್ದಾರೆ.

ಲಕ್ಷಾಂತರ ಸಂಗ್ರಹ!

ಹೆಬ್ರಿಯ ಕುಚ್ಚೂರು ಗ್ರಾಮದ ಸಾನ್ವಿ ಎನ್ನುವ ಪುಟ್ಟ ಬಾಲಕಿಗೆ ಬೋನ್ ಮ್ಯಾರೊವ್ ಎನ್ನುವ ಚಿಕಿತ್ಸೆಗಾಗಿ ಸಚಿನ್ ಶೆಟ್ಟಿಯ SHUTERBOX ತಂಡ ಅಷ್ಟಮಿಯ ದಿನ ವೇಷ ಧರಿಸಿ ಧನ ಸಹಾಯಕ್ಕೆ ಮುಂದಾಗಿದ್ದರು. ಅಚ್ಚರಿಯ ಸಂಗತಿ ಎಂದರೆ ಒಂದೇ ದಿನ ವೇಷ ಹಾಕಿ ಸಂಗ್ರಹಿಸಿದ ಮೊತ್ತ ಸರಿಸುಮಾರು ಹತ್ತು ಲಕ್ಷ ರೂ. ಗಳು!

ವೇಷ ಧರಿಸಿ ಹಣ ಸಂಗ್ರಹಿಸಿದ್ದಲ್ಲದೇ, ಇಡೀ ತಂಡ ಸೋಶಿಯಲ್ ಮೀಡಿಯಾದಲ್ಲಿ ಬಾಲಕಿಯ ಚಿಕಿತ್ಸೆಗೆ ಧನ ಸಹಾಯ ಮಾಡುವಂತೆ ಮನವಿ ಮಾಡಿತ್ತು. ಒಂದೆರಡು ಲಕ್ಷ ಹಣ ಸಂಗ್ರಹಿಸಿ ಬಾಲಕಿಯ ಕುಟುಂಬಸ್ಥರಿಗೆ ಹಸ್ತಾಂತರಿಸುವ ಯೋಚನೆ ಅವರದ್ದಾಗಿತ್ತು. ಅದರೆ ಉಡುಪಿಯ ಯೂಟ್ಯೂಬರ್ ಮನವಿಗೆ ಲಕ್ಷ ಲಕ್ಷ ಹಣ ಹರಿದು ಬಂದಿದೆ. ಸದ್ಯ ಸಚಿನ್ ಶೆಟ್ಟಿ ಮತ್ತು ಅವರ ತಂಡ ಸಾರ್ವಜನಿಕರಿಂದ ಬಂದ ಎಲ್ಲ ಮೊತ್ತವನ್ನೂ ಬಾಲಕಿ‌ ಸಾನ್ವಿ ಮನೆಯವರಿಗೆ ಹಸ್ತಾಂತರಿಸಿದ್ದಾರೆ. ಜೊತೆಗೆ ಇನ್ನಿತರ ಸಂಘ ಸಂಸ್ಥೆಗಳು ಕೂಡ ತಮ್ಮ‌ ಕೈಲಾದಷ್ಟು ಮೊತ್ತವನ್ನು ನೀಡಿವೆ. ಚಿಕಿತ್ಸೆಗಾಗಿ ಇನ್ನೂ ಸುಮಾರು ಹದಿನೈದು ಲಕ್ಷದವರೆಗೆ ಹಣ ಸಂಗ್ರಹವಾಗಬೇಕಾಗಿದೆ. ದಾನಿಗಳು ಸಹಕರಿಸುವಂತೆ ಶಟರ್ ಬಾಕ್ಸ್ ತಂಡ ಹಾಗೂ ಸಾನ್ವಿ ಹೆತ್ತವರು ಮನವಿ ಮಾಡಿದ್ದಾರೆ.

ನಾಲ್ಕನೇ ತರಗತಿ ಓದುತ್ತಿರುವ ಸಾನ್ವಿ ಎಂಬ ಬಾಲಕಿಗೆ ತಲಾಸೆಮಿಯ ಮೆಜರ್ ಎನ್ನುವ ಖಾಯಿಲೆ ಇದ್ದು ,ಇದರ ಚಿಕಿತ್ಸೆಗೆ ನಲ್ವತ್ತು ಲಕ್ಷ ಹಣದ ಅಗತ್ಯವಿದೆ.

Edited By : Manjunath H D
PublicNext

PublicNext

25/08/2022 06:20 pm

Cinque Terre

42.12 K

Cinque Terre

8

ಸಂಬಂಧಿತ ಸುದ್ದಿ