ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕಾರನ್ನು ಬ್ಯಾಂಕ್ ನಲ್ಲಿ ಅಡವಿಟ್ಟು ರಿಕ್ಷಾದಲ್ಲೇ ಲಡಾಕ್ ಗೆ ಹೊರಟ ಕನಸುಗಾರರಿವರು!

ವರದಿ: ರಹೀಂ ಉಜಿರೆ

ಉಡುಪಿ : ಕನಸು ಕಾಣುವುದು ಸುಲಭ.ಆದರೆ ಕಂಡ ಕನಸನ್ನು ಈಡೇರಿಸುವುದು ತುಂಬ ಮುಖ್ಯ. ಕೇರಳದ ಪಾಲಕ್ಕಾಡ್ ನ ಇಬ್ಬರು ಆಟೋ ಡ್ರೈವರ್ ಗಳು ತಮ್ಮ ಲಡಾಕ್ ಯಾತ್ರೆಯ ಕನಸನ್ನು ನನಸಾಗಿಸಲು ತಮ್ಮ ವಾಹನವನ್ನೇ ಅಡವಿಟ್ಟು ಸಂಚಾರ ಆರಂಭಿಸಿದ್ದಾರೆ.

ಸುರೇಶ್ ಮತ್ತು ವಾಸು ಕೇರಳದ ಪಾಲಕ್ಕಾಡ್ ನವರು. ರಿಕ್ಷಾ ಚಾಲನೆ ಇವರ ವೃತ್ತಿ. ಆದರೆ ಕನಸಿಗೆ ಮಿತಿಯುಂಟೆ? ಕಳೆದ ಮೂರು ವರ್ಷಗಳಿಂದ ಲಡಾಕ್ ಯಾತ್ರೆಯ ಕನಸು ಕಾಣುತ್ತಿದ್ದರು, ಆದರೆ ಕೊರೋನಾ ಕಾರಣದಿಂದ ಸಾಧ್ಯವಾಗಿರಲಿಲ್ಲ.ಕೈಯಲ್ಲೂ ದುಡ್ಡಿರಲಿಲ್ಲ.

ಸದ್ಯ ತಾವು ದುಡಿಯುತ್ತಿರುವ ರಿಕ್ಷಾ ವನ್ನೇ ಪ್ರೈವೇಟ್ ಅಗಿ ಪರಿವರ್ತಿಸಿ ,ಈ ವರ್ಷ ತಮ್ಮ ಕನಸು ನನಸು ಮಾಡುವುದಕ್ಕೆ ನಿರ್ಧಾ ಹೊರಟಿದ್ದಾರೆ. ಆದರೆ ಹಣದ ಸಮಸ್ಯೆ ಆಗಿತ್ತು. ಈ ಕಾರಣದಿಂದ ತಮ್ಮಲ್ಲಿದ್ದ ಒಂದು ಕಾರನ್ನು ಬ್ಯಾಂಕ್ ನಲ್ಲಿ ಅಡವಿಟ್ಟು ಅದರಿಂದ ಬಂದ ದುಡ್ಡಿನಿಂದ ತಮ್ಮ ರಿಕ್ಷಾದ ಮೂಲಕ ಯಾತ್ರೆ ಆರಂಭಿಸಿದ್ದಾರೆ!

ಇವರ ಪ್ರವಾಸ ಉಡುಪಿಗೆ ತಲುಪಿದ್ದು, ಕೃಷ್ಣನ ದರ್ಶನ ಪಡೆದು ಮುಂದೆ ಮುರುಡೇಶ್ವರ, ಗೋವಾ, ಗುಜರಾತ್, ರಾಜಸ್ಥಾನ್, ಪಂಜಾಬ್, ಕಾಶ್ಮೀರ್ ಮೂಲಕ ಸಂಚರಿಸಲಿದ್ದಾರೆ. ಮರಳಿ ಬರುವ ವೇಳೆ ದೆಹಲಿ ಮಧ್ಯಪ್ರದೇಶ ಸಂದರ್ಶಿಸುವ ಯೋಜನೆ ಇವರದ್ದು. ಏನೇ ಆಗಲಿ ಈ ಯುವಕರ ಸಾಹಸವನ್ನು ಮೆಚ್ಚಲೇಬೇಕು!

Edited By : Nagesh Gaonkar
PublicNext

PublicNext

24/08/2022 10:06 pm

Cinque Terre

33.81 K

Cinque Terre

3

ಸಂಬಂಧಿತ ಸುದ್ದಿ