ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ವಿಚಿತ್ರ ವೇಷದ ಮೂಲಕ ಗಮನ ಸೆಳೆದ ಸಮಾಜ ಸೇವಕ ರವಿ ಕಟಪಾಡಿ

ಉಡುಪಿ: ಪ್ರತಿ ವರ್ಷ ವಿಶಿಷ್ಟ ವೇಷ ಹಾಕಿ ಹಣ ಸಂಗ್ರಹಿಸಿ ಮಕ್ಕಳ ಚಿಕಿತ್ಸೆಗೆ ನೀಡುವ ರವಿ ಕಟಪಾಡಿ, ಈ ವರ್ಷ " ಡೀ ಮನ್" ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ವೇಷ ಹಾಕಿ ಉಡುಪಿ ಸೇರಿದಂತೆ ಹಲವು ಕಡೆಗಳಲ್ಲಿ ಸಂಚರಿಸಿ ಜನರನ್ನು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ ರವಿ.

ಕಟಪಾಡಿಯ ಕೋಟೆಬೆಟ್ಟು ಬಬ್ಬು ಸ್ವಾಮಿ ದೈವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ರವಿ ಕಟಪಾಡಿ ಹಣ ಸಂಗ್ರಹಕ್ಕೆ ಹೊರಟರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ರವಿ, ಕಳೆದ ಏಳು ವರ್ಷಗಳಿಂದ ಕೃಷ್ಣಾಷ್ಟಮಿಯಂದು ವೇಷ ಹಾಕಿ ತಂಡದೊಂದಿಗೆ ಪ್ರದರ್ಶನ ನೀಡುತ್ತಿದ್ದೇನೆ. ಈ ಬಾರಿ ಎಂಟನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದೇನೆ. ಇದುವರೆಗೆ 90 ಲಕ್ಷ ರೂಪಾಯಿಯಷ್ಟು ಹಣವನ್ನು ಸಂಗ್ರಹ ಮಾಡಿದ್ದು, 66 ಮಕ್ಕಳಿಗೆ ಚಿಕಿತ್ಸೆಗಾಗಿ ನೀಡಿದ್ದೇವೆ. ಅನೇಕ ಅನಾರೋಗ್ಯ ಪೀಡಿತ ಮಕ್ಕಳ ಹೆಸರುಗಳು ನಮಗೆ ಬಂದಿದ್ದು ಅವರೆಲ್ಲರ ಬೇಡಿಕೆಗಳನ್ನು ಈಡೇರಿಸುವ ಪ್ರಯತ್ನವನ್ನು ನಾವು ಮಾಡಲಿದ್ದೇವೆ. ಹೀಗಾಗಿ ಎಲ್ಲರೂ ಹೆಚ್ಚಿನ ರೀತಿಯ ಸಹಕಾರವನ್ನು ನೀಡಿ ಎಂದು ಮನವಿ ಮಾಡಿದ್ದಾರೆ.

Edited By : Shivu K
Kshetra Samachara

Kshetra Samachara

19/08/2022 09:49 pm

Cinque Terre

10.35 K

Cinque Terre

2

ಸಂಬಂಧಿತ ಸುದ್ದಿ