ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡಬ: ಧ್ವಜಾರೋಹಣ ಸಮಯದಲ್ಲಿ ಮೃತಪಟ್ಟ ಮಾಜಿ ಯೋಧನಿಗೆ ಅಂತಿಮ ವಿದಾಯ..

ಕಡಬ : ಕಡಬದಲ್ಲಿ ಧ್ವಜಾರೋಹಣದ ವೇಳೆ ಕುಸಿದು ಬಿದ್ದು ಅಸ್ವಸ್ಥಗೊಂಡು ಮೃತಪಟ್ಟ ನಿವೃತ್ತ ಸೈನಿಕ ಗಂಗಾಧರ ಗೌಡ ಅವರ ಪಾರ್ಥಿವ ಶರೀರ ಆಂಬ್ಯುಲೆನ್ಸ್ ಮೂಲಕ ಕಡಬ ತಲುಪಿದ್ದು, ಅಂತಿಮ ವಿದಾಯ ಸಲ್ಲಿಸಲಾಗಿದೆ.

ಕಡಬ ತಹಶೀಲ್ದಾರ್ ಕಚೇರಿ ಮುಂಭಾಗ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದು ಕುಟುಂಬ ಸದಸ್ಯರು, ಸ್ನೇಹಿತರು, ಕಡಬ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಭಾಗವಹಿಸಿ, ಯೋಧನ ಅಂತಿಮ ದರ್ಶನ ಪಡೆದು, ಕಂಬನಿ ಮಿಡಿದರು. ನಿವೃತ್ತ ಸೈನಿಕರಿಂದ ಸೇನಾ ಶಿಷ್ಟಚಾರದಂತೆ ಗೌರವ ವಂದನೆ ಸಲ್ಲಿಸಲಾಯಿತು.

ನೂರಾರು ಜನ ಗ್ರಾಮಸ್ಥರು,ಮಾಜಿ ಸೈನಿಕರು, ಶಾಲಾ, ಕಾಲೇಜು ವಿದ್ಯಾರ್ಥಿಗಳು, ಹಿರಿಯರು, ಯುವಕರು, ಮಹಿಳೆಯರು ಪಾರ್ಥಿವ ಶರೀರಕ್ಕೆ ಕೈಮುಗಿದು ಗೌರವ ಸಲ್ಲಿಸಿದರು. ಸೇರಿದ ಜನ ಸಮೂಹದ ನಡುವೆ ಯೋಧ ಗಂಗಾಧರ ಅಮರ್ ರಹೇ, ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಮೊಳಗಿತು.

ನೆರದಿದ್ದ ನೂರಾರು ಜನರ ನಡುವೆ ಪಾರ್ತಿವ ಶರೀರವನ್ನು ತಹಶೀಲ್ದಾರ್ ಕಚೇರಿಯಿಂದ ಮುಖ್ಯ ಪೇಟೆಯವರೆಗೆ ಮೆರವಣಿಗೆ ಮೂಲಕ ತರಲಾಯಿತು.

ಯೋಧನ ಪಾರ್ಥಿವ ಶರೀರಕ್ಕೆ ಮಾಜಿ ಸೈನಿಕರು,ಹಲವು ಗಣ್ಯರು,ಅಧಿಕಾರಿಗಳು ಮಾಲಾರ್ಪಣೆ ಮಾಡಿ ಅಂತಿಮ ನಮನ ಸಲ್ಲಿಸಿದರು. ಕಡಬ ತಾಲೂಕು ತಹಶೀಲ್ದಾರ್ ಅನಂತ ಶಂಕರ, ಠಾಣಾಧಿಕಾರಿ ಆಂಜನೇಯ ರೆಡ್ಡಿ ,ಮಾಜಿ ಸೈನಿಕರ ಸಂಘದ ಅಧ್ಯಕ್ಷ ಜೆ.ಪಿ ಚೆರಿಯಾನ್ ಸೇರಿದಂತೆ ಹಲವು ಅಧಿಕಾರಿಗಳು, ರಾಜಕಾರಣಿಗಳು ಪಾಲ್ಗೊಂಡಿದ್ದರು. ಮೃತರ ಮನೆ ಮುಳಿಮಜಲಿನ ಅಮೈ ಎಂಬಲ್ಲಿ ಮೃತರ ಅಂತ್ಯಕ್ರಿಯೆ ನಡೆದಿದೆ.

Edited By : Nagesh Gaonkar
Kshetra Samachara

Kshetra Samachara

15/08/2022 10:59 pm

Cinque Terre

21.69 K

Cinque Terre

1

ಸಂಬಂಧಿತ ಸುದ್ದಿ