ಶಿರ್ವ: ಬಡತನದಲ್ಲೇ ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿ ಮಂಗಳೂರು ವಿವಿಯ ಬಂಗಾರದ ಪದಕ ಗೆದ್ದ ಶಿರ್ವದ ಅಕ್ಷಿತಾ ಹೆಗ್ಡೆ ,ಅವರು ಡಿವಿಜಿ ಅವರ ಮಂಕು ತಿಮ್ಮನ ಕಗ್ಗವನ್ನು ಕನ್ನಡಿ ಕೈ ಬರಹದ ಮೂಲಕ ಬರೆದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತನ್ನ ಹೆಸರು ಛಾಪಿಸಿದ್ದಾರೆ.
ಮಂಕುತಿಮ್ಮನ ಕಗ್ಗದಲ್ಲಿ 900ಕ್ಕೂ ಅಧಿಕ ಪದ್ಯಗಳಿದ್ದು, ಈ ಪೈಕಿ 13 ಪದ್ಯಗಳನ್ನು ಆಯ್ಕೆ ಮಾಡಿ 52 ಲೈನ್‌ಗಳನ್ನು 45.11 ನಿಮಿಷದಲ್ಲಿ ಬರೆದು ಈ ಸಾಧನೆ ಮರೆದಿದ್ದಾರೆ.ಈ ಸಾಧನೆಗಾಗಿ ಇಂಡಿಯಾ ಬುಕ್ ಜೊತೆಗೆ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ನಲ್ಲೂ ತಮ್ಮ ಹೆಸರನ್ನು ಮುದ್ರಿಸಿದ್ದಾರೆ.
ಅಕ್ಷಿತಾ ಹೆಗ್ಡೆ ಅವರು ಕಲ್ಯ ಸರಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ, ಬೆಳ್ಮಣ್ಣು ಸರಕಾರಿ ಪ.ಪೂ ಕಾಲೇಜಿನಲ್ಲಿ ಪಿಯುಸಿ, ಶಿರ್ವ ಮೂಲ್ಕಿ ಸುಂದರರಾಮ್ ಶೆಟ್ಟಿ ಕಾಲೇಜಿನಲ್ಲಿ ಪದವಿ ಓದಿದ್ದರು.ಕುಕ್ಕೆಹಳ್ಳಿಯ ದಿ.ಸುಭಾಶ್ ಚಂದ್ರ ಹೆಗ್ಡೆ ,ಶಿರ್ವದ ಜಯಲಕ್ಷ್ಮೀ ಪುತ್ರಿ ಈಕೆ.
PublicNext
06/08/2022 03:02 pm