ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪಂಜುರ್ಲಿ ಮೊಗಕ್ಕೆ ಡಿಜಿಟಲ್ ಟಚ್; ಶಶಾಂಕ್ ಕುಂಚದಲ್ಲಿ ಮತ್ತೊಂದು ವೆಕ್ಟರ್ ಆರ್ಟ್

ಪಬ್ಲಿಕ್ ನೆಕ್ಸ್ಟ್ ವಿಶೇಷ ವರದಿ: ವಿಶ್ವನಾಥ ಪಂಜಿಮೊಗರು

ಮಂಗಳೂರು: ಕಲಾವಿದ ಎಸ್.ಜೆ.ಶಶಾಂಕ್ ಆಚಾರ್ಯ ಅವರ ವೆಕ್ಟರ್ ಆರ್ಟ್ ಕುಂಚದಲ್ಲಿ ಈಗಾಗಲೇ ತುಳುನಾಡಿನ ದೈವಗಳಾದ ಕೊರಗಜ್ಜ, ಮಂತ್ರಜಾವದೆ, ಕಲ್ಲುರ್ಟಿ, ಗುಳಿಗ ಮುಂತಾದ ದೈವಗಳು ಸೇರಿದಂತೆ ಕಟೀಲು ಶ್ರೀದೇವಿ, ಕೋಟಿ - ಚೆನ್ನಯರು, ಬ್ರಹ್ಮಶ್ರೀ ನಾರಾಯಣ ಗುರು ಚಿತ್ರ ಮೂಡಿ ಬಂದು ಜನಮನ್ನಣೆ ಪಡೆದಿತ್ತು. ಇದೀಗ ಶಶಾಂಕ್, ಪಂಜುರ್ಲಿ ದೈವದ ಮೊಗಕ್ಕೆ ವೆಕ್ಟರ್ ಆರ್ಟ್ ಮೂಲಕ ಡಿಜಿಟಲ್ ಟಚ್ ನೀಡಿದ್ದಾರೆ.

ಪಂಜುರ್ಲಿಯ ಲೋಹದ ಮೊಗದ ರೀತಿಯಲ್ಲಿ ಕಾಣುವಂತೆ ಈ ವೆಕ್ಟರ್ ಆರ್ಟ್ ಚಿತ್ರಿಸಲಾಗಿದೆ. ಶಶಾಂಕ್ ಆಚಾರ್ಯ ಅವರ ಸಂಬಂಧಿಯೊಬ್ಬರು ದೈವಗಳ ಲೋಹದ ಮೊಗವನ್ನು ಮಾಡುವ ವೃತ್ತಿಪರರಂತೆ. ಅವರಲ್ಲಿಗೆ ಆಗಾಗ ಶಶಾಂಕ್ ಹೋಗುತ್ತಿರುತ್ತಾರೆ. ಇದೇ ಸಂದರ್ಭ ಅವರಿಗೆ ಪಂಜುರ್ಲಿಯ ಮೊಗ ನೋಡಿ ಯಾಕೆ ಇದನ್ನು ವೆಕ್ಟರ್ ಆರ್ಟ್ ನಲ್ಲಿ ಬಿಡಿಸಬಾರದೆಂದು ಅನ್ನಿಸಿದೆ. ಬಳಿಕ ಆ ಕಲ್ಪನೆಗೆ ಡಿಜಿಟಲ್ ಟಚ್ ನೀಡಿದ್ದಾರೆ. ಮೂರು ದಿನಗಳ ಕಾಲ ಶ್ರಮಪಟ್ಟು ಈ ವೆಕ್ಟರ್ ಆರ್ಟ್ ರಚಿಸಿದ್ದಾರೆ.

ಈ ವೆಕ್ಟರ್ ಆರ್ಟ್ ಚಿತ್ರವನ್ನು ಬಿಡಿಸಲು ಯಾವುದೇ ಪೈಂಟಿಂಗ್‌, ಫೋಟೊ ಆಧಾರವಾಗಿಟ್ಟಿಲ್ಲ. ಬದಲಾಗಿ, ತಮ್ಮ ಕಲ್ಪನೆಯನ್ನೇ ಚಿತ್ರರೂಪಕ್ಕೆ ಸಾಕಾರಗೊಳಿಸಿದ್ದಾರಂತೆ. ಫೋಟೊಶಾಪ್‌ನಲ್ಲಿ ಪೆನ್‌ ಟೂಲ್‌ ಹಾಗೂ ಬ್ರಶ್‌ ಟೂಲ್‌ ಉಪಯೋಗಿಸಿ ಚಿತ್ರ ರಚಿಸಲಾಗಿದೆ. ಯಾವುದೇ ಡ್ರಾಯಿಂಗ್ ಪ್ಯಾಡ್ ಬಳಸದೆ ಬರೀ ಮೌಸ್ ಹಾಗೂ ಕೀಬೋರ್ಡ್ ನಿಂದಲೇ ಈ ವೆಕ್ಟರ್ ಆರ್ಟ್ ರಚನೆಯಾಗಿದೆ.

ಈ ಹಿಂದೆ ಶಶಾಂಕ್ ಆಚಾರ್ಯ ಮಾಡಿದ್ದ ಕೊರಗಜ್ಜನ ವೆಕ್ಟರ್ ಆರ್ಟ್ ಗೆ ಭಾರೀ ಬೇಡಿಕೆ ಬಂದಿತ್ತು. ಈಗಲೂ ಸಾಕಷ್ಟು ದ್ವಿಚಕ್ರ ವಾಹನಗಳಲ್ಲಿ ಇವರದ್ದೇ ವೆಕ್ಟರ್ ಆರ್ಟ್ ನ ಕೊರಗಜ್ಜನ ಚಿತ್ರ ರಾರಾಜಿಸುತ್ತಿದೆ. ಇದೀಗ ರಚಿಸಿರುವ ಪಂಜುರ್ಲಿ ಮೊಗದ ವೆಕ್ಟರ್ ಆರ್ಟ್ ಗೂ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಶಶಾಂಕ್ ಆಚಾರ್ಯ ಹೇಳುತ್ತಾರೆ.

Edited By :
PublicNext

PublicNext

18/06/2022 01:34 pm

Cinque Terre

49.86 K

Cinque Terre

1

ಸಂಬಂಧಿತ ಸುದ್ದಿ