ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ಮದುವೆಗೆ ಕೂಡಿಟ್ಟ ಹತ್ತು ಲಕ್ಷ ಬಡವರಿಗೆ ದಾನ: ಸರಳ ವಿವಾಹವಾಗಿ ಮಾದರಿಯಾದ ಯುವಕ

ಕಾರ್ಕಳ: ಸರಳವಾಗಿ ಮದುವೆಯಾದ ಯುವಕನೊಬ್ಬ, ತನ್ನ ಮದುವೆಗೆಂದು ಕೂಡಿಟ್ಟಿದ್ದ ಬರೋಬ್ಬರಿ ಹತ್ತು ಲಕ್ಷ ಹಣವನ್ನು ಬಡವರಿಗೆ ದಾನ ಮಾಡಿ ಮಾದರಿಯಾಗಿದ್ದಾರೆ. ಅದ್ಧೂರಿತನದ ಬದಲು ಮಾನವೀಯತೆ ಮೆರೆದ ಯುವಕ, ಉಡುಪಿ ಜಿಲ್ಲೆಯ ಕಾರ್ಕಳದ ಸುಕೇಶ್ ಶೆಟ್ಟಿ.

ಮುಂಬೈನಲ್ಲಿ ಉದ್ಯಮಿಯಾಗಿರುವ ಸುಕೇಶ್ ಶೆಟ್ಟಿ, ತನ್ನ ಮದುವೆಗೆ ಅಂತ ಹತ್ತು ಲಕ್ಷ ರೂ.ಗಳನ್ನು ತೆಗೆದಿಟ್ಟಿದ್ದರು. ಆದರೆ ಬಡವರ ಬಗ್ಗೆ ಕಾಳಜಿ ಹೊಂದಿದ್ದ ಸುಕೇಶ್ ಶೆಟ್ಟಿ ಅದ್ದೂರಿ ಮದುವೆಯ ಬದಲಾಗಿ ಕಾರ್ಕಳದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸರಳವಾಗಿ ವಿವಾಹವಾದರು. ಹೀಗಾಗಿ ಸರಳ ವಿವಾಹದಿಂದಾಗಿ ಉಳಿದ 10 ಲಕ್ಷ ಹಣವನ್ನು ಬೇರೆ ಸಮಸ್ಯೆಯಿಂದ ಬಳಲುತ್ತಿರುವ ಬಡವರಿಗೆ ನೆರವು ನೀಡಿದ್ದಾರೆ.

ಆರೋಗ್ಯ ಸಮಸ್ಯೆ, ವಿದ್ಯಾಭ್ಯಾಸಕ್ಕೆ, ಮನೆ ರಿಪೇರಿಗೆ, ದನ ಖರೀದಿಗೆ ಹೀಗೆ ಹಲವು ಮಂದಿ ಬಡವರಿಗೆ ಧನ ಸಹಾಯ ಮಾಡಿದ್ದಾರೆ. ಸುಕೇಶ್ ಶೆಟ್ಟಿ ಅವರ ಒಳ್ಳೆಯ ಕೆಲಸಕ್ಕೆ ಗುರುಪುರದ ವಜ್ರದೇಹಿ ಸ್ವಾಮೀಜಿ ಸಹಿತ ಮದುವೆಗೆ ಬಂದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Edited By :
Kshetra Samachara

Kshetra Samachara

19/05/2022 05:19 pm

Cinque Terre

16.84 K

Cinque Terre

2

ಸಂಬಂಧಿತ ಸುದ್ದಿ