ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಇಂಜಿನಿಯರ್ ಆದರೂ ಹವ್ಯಾಸಿ ಕಲೆಗಾರ ದೀಪಕ್ ಆಚಾರ್ಯ ಮಲ್ಪೆ

ಉಡುಪಿ: ಸಾಧನೆಯ ಪಥದಲ್ಲಿರುವ ಕಲಾಭಿಮಾನಿಗಳು ವಿದ್ಯಾಭ್ಯಾಸ ಜೊತೆ ಜೊತೆಗೆ ಚಿತ್ರಕಲೆ, ನೃತ್ಯ ಇನ್ನಿತರ ಕಲೆಗಳನ್ನು ಮೈಗೂಡಿಸಿಕೊಂಡಿರುತ್ತಾರೆ. ಅಂತಹ ಕಲೆಗಾರರಲ್ಲಿ ಒಬ್ಬರು ದೀಪಕ್ ಆಚಾರ್ಯ ಮಲ್ಪೆ. ಇವರು ಗಂಗಾಧರ್ ಆಚಾರ್ಯ ಹಾಗೂ ಪ್ರೇಮ ಅವರ ಪುತ್ರ. ಇದೀಗ ಬೆಂಗಳೂರಿನ ಇಂಜಿಲಿಂಕ್ಸ್ ಕಂಪೆನಿಯಲ್ಲಿ ಸಾಫ್ಟ್‌ ವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರೊಂದಿಗೆ ಹವ್ಯಾಸಿ ಕಲೆಗಾರರೂ ಕೂಡ.

ದೀಪಕ್ ತನ್ನ ನಿರಂತರ ಸ್ವ ಪ್ರಯತ್ನದಿಂದ ಯಾವುದೇ ಚಿತ್ರಕಲಾ ತರಗತಿಗೆ ಹೋಗದೇ ಮೊದಲು ಕಾಲ್ಪನಿಕ ಚಿತ್ರಗಳನ್ನು ಬಿಡಿಸುತ್ತಿದ್ದರು. ಗೋಡೆಗಳ ಮೇಲೆ ಬಣ್ಣಗಳ ಚಿತ್ತಾರ ಬಿಡಿಸುವ ಇವರು, ದೇವರು, ವ್ಯಕ್ತಿಗಳ ಭಾವಚಿತ್ರಗಳು ಹೊಲುವಂತಹ ತದ್ರುರೂಪಿ ಚಿತ್ರಗಳ ಕಲಾಕಾರರಾಗಿದ್ದರು. ನಂತರದ ದಿನಗಳಲ್ಲಿ ಚಿತ್ರಗಳನ್ನು ಬಿಡಿಸಿ ಕೊಡುವಂತೆ ಬೇಡಿಕೆಗಳು ಹೆಚ್ಚಾದಾಗ ವಿದ್ಯಾಭ್ಯಾಸದ ಜೊತೆಗೆ ಇದನ್ನು ಪಾರ್ಟ್ ಟೈಮ್ ಉದ್ಯೋಗವನ್ನಾಗಿಸಿಕೊಂಡು ಬಿಡುವಿನ ಸಮಯದಲ್ಲಿ ಆರ್ಡರ್ ಬಂದ ಚಿತ್ರಗಳನ್ನು ಬಿಡಿಸಿ, ಆದರಿಂದ ಬಂದ ಸಂಪಾದನೆಯಲ್ಲಿ ತಮ್ಮ ವಿದ್ಯಾಭ್ಯಾಸಕ್ಕೂ ವಿನಿಯೋಗಿಸಿ, ಮನೆಯ ಖರ್ಚು ವೆಚ್ಚವನ್ನು ಸರಿದೂಗಿಸಿಕೊಳ್ಳುತ್ತಿದ್ದರು.

ಕೊರೊನಾ ಸಾಂಕ್ರಾಮಿಕ ಕಾಯಿಲೆಯ ಲಾಕ್ ಡೌನ್ ಸಂದರ್ಭದಲ್ಲಿ ಇವರು ಯೂಟ್ಯೂಬ್ ಚಾನೆಲ್‌ ಸಹಾಯದಿಂದ ಚಿತ್ರಕಲೆಯನ್ನು ಕಲಿಯುವ ಒಲವನ್ನು ಇನ್ನಷ್ಟು ಬಲಪಡಿಸಿಕೊಂಡರು. ತನ್ನ ಕಲ್ಪನೆಗೆ ಶಕ್ತಿ ನೀಡಿ ಇವರ ಕಲೆಯನ್ನು ಹಿಮ್ಮಡಿಗೊಳಿಸಿಕೊಂಡು ಸಾಫ್ಟ್‌ ವೇರ್ ಇಂಜಿನಿಯರ್ ಹುದ್ದೆಯ ಜೊತೆ ಜೊತೆಗೆ ಕಲೆಯನ್ನು ತಮ್ಮ ಪಾರ್ಟ್ ಟೈಮ್ ಕೆಲಸವಾಗಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇವರ ಈ ಸಾಧನೆ ಇನ್ನಷ್ಟು ಯಶಸ್ಸನ್ನು ಕಾಣಲಿ ಎಂಬುದೇ ನಮ್ಮೆಲ್ಲರ ಹಾರೈಕೆ.

Edited By : Shivu K
Kshetra Samachara

Kshetra Samachara

24/03/2022 07:09 pm

Cinque Terre

9.53 K

Cinque Terre

0

ಸಂಬಂಧಿತ ಸುದ್ದಿ