ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಹಿತಿ,ಸಂಘಟಕ, ಹಿರಿಯ ರಂಗಕರ್ಮಿ ಪ್ರೊ. ಮೇಟಿ ಮುದಿಯಪ್ಪ ನಿಧನ

ಉಡುಪಿ: ಪ್ರೊಫೆಸರ್ ,ಸಾಹಿತಿ, ಸಂಘಟಕ, ಜಿಲ್ಲೆಯ ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದ ಹಿರಿಯ ರಂಗಕರ್ಮಿ ಮೇಟಿ ಮುದಿಯಪ್ಪ (63) ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.ಪ್ರೊ. ಮೇಟಿ ಮುದಿಯಪ್ಪ ಕಳೆದ 35 ವರ್ಷಗಳಿಂದ ಶಿಷ್ಯರ ಮೆಚ್ಚಿನ ಗುರುಗಳಾಗಿ ಸೇವೆ ಸಲ್ಲಿಸಿದ್ದರು.ಈಗಲೂ ಹೋದಕಡೆಗಳೆಲ್ಲ ಶಿಷ್ಯವೃಂದ ಇವರನ್ನು ಗೌರವಿಸುವುದು ಇವರ ಜನಪ್ರಿಯತೆಗೆ ಸಾಕ್ಷಿ.

.

ತಮ್ಮ ಸರಳ ಗುಣಗಳಿಂದ ಎಲ್ಲರೊಂದಿಗೆ ಬೆರೆಯುವ ಮೇಟಿ ಯವರು  ಕಿರಿಯರೆಂಬ ಬೇಧ ಭಾವವಿಲ್ಲದೆ ಪ್ರತಿಭೆಗೆ ಮನ್ನಣೆ ಹಾಗು ಪ್ರೋತ್ಸಾಹ  ಕೊಡುವ ಸ್ನೇಹ ಜೀವಿಯಾಗಿದ್ದರು.ಕುರುಬ ಸಂಘಗಳಲ್ಲಿ ಸಕ್ರಿಯರಾಗಿದ್ದರು.ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಶಾಸಕ ರಘುಪತಿ ಭಟ್ ಸಹಿತ ಗಣ್ಯರು ಸಂತಾಪ ಸೂಚಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

18/03/2022 01:53 pm

Cinque Terre

3.38 K

Cinque Terre

0

ಸಂಬಂಧಿತ ಸುದ್ದಿ