ಉಡುಪಿ: ಆಂಧ್ರಪ್ರದೇಶದ ಅನಂತಪುರದ ನಿವಾಸಿ ಬಾಲಕನೊಬ್ಬ ಪೋಷಕರ ಜೊತೆಗೆ ಕೃಷ್ಣಮಠಕ್ಕೆ ಆಗಮಿಸಿ ಪೋಷಕರಿಂದ ತಪ್ಪಿಸಿಕೊಂಡಿದ್ದಾನೆ. ಈತನನ್ನು ಸಮಾಜಸೇವಕರು ರಕ್ಷಿಸಿ ಮಣಿಪಾಲದ ಹೊಸಬೆಳಕು ಆಶ್ರಮಕ್ಕೆ ದಾಖಲಿಸಿದ್ದಾರೆ.
ಬಾಲಕನು ಹೆಸರು ಜೆ.ಕೆ ನಿತಿನ್ ಎಂದು ತಿಳಿದುಬಂದಿದೆ. ಆಂಧ್ರದ ಅನಂತಪುರದ ರಮಣಮೂರ್ತಿ ಎಂಬವರ ಮಗನಾದ ಈತ, ತಂದೆ ತಾಯಿಯೊಂದಿಗೆ ಯಾತ್ರರ್ಥಿಯಾಗಿ ಉಡುಪಿಗೆ ಬಂದಿದ್ದೆ. ಅವರಿಂದ ತಪ್ಪಿಸಿಕೊಂಡಿರುವುದಾಗಿ ಬಾಲಕ ಹೇಳಿಕೊಂಡಿದ್ದಾನೆ. ಸಂಬಂಧಿಕರು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ. (91649 01111)
Kshetra Samachara
07/03/2022 09:05 pm