ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮಗನನ್ನು ದಯಮಾಡಿ ಕಾಪಾಡಿ,ಗೋಗರೆಯುತ್ತಿರುವ ತಾಯಿ

ಮಂಗಳೂರು: ಉಕ್ರೇನ್ ನಲ್ಲಿ ವೈದ್ಯಕೀಯ ವಿದ್ಯಾಭ್ಯಾಸಕ್ಕೆಂದು ತೆರಳಿದ್ದ ಇಲ್ಲಿನ ಕ್ಲೇಟನ್ ಎಂಬಾತ ಸದ್ಯ ಉಕ್ರೇನ್ ಕ್ಯಾಪಿಟಲ್ ಕೀವ್ ನಗರದಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ.

"ಬೆಳಗ್ಗೆ ಅವನು ಅಷ್ಟು ಪ್ಯಾನಿಕ್ ಆಗಿರಲಿಲ್ಲ, ಆದರೆ ಈಗ ಸ್ವಲ್ಪ ಭಯದಲ್ಲಿ ಇದ್ದಾನೆ

ಬೆಳಗ್ಗೆ 9 ಗಂಟೆಯಿಂದ ಪ್ರತಿ ಅರ್ಧ ಗಂಟೆಗೊಮ್ಮೆ ಅವನು ನಮ್ಮ ಜೊತೆ ಮಾತನಾಡುತ್ತಿದ್ದಾನೆ. ಈಗ ಅಲ್ಲೇ ಹತ್ತಿರದಲ್ಲಿ ಇದ್ದ ಒಂದು ಏರ್ ಪೋರ್ಟ್ ನಲ್ಲಿ ದೊಡ್ಡ ಮಿಸೈಲ್ ದಾಳಿ ಆಗಿದೆ. ಗ್ರೊಸರಿ ಸ್ಟೋರ್ ಗಳಲ್ಲಿ ಎಲ್ಲಾ ಸ್ವಲ್ಪ ಜನರು ಪ್ಯಾನಿಕ್ ಆಗಿದ್ದಾರೆ," ಎಂದು ಆತನ ತಾಯಿ ಭಯಭೀತರಾಗಿ ಮಾಧ್ಯಮದ ಮುಂದೆ ಅಲವತ್ತು ಮಾಡಿಕೊಂಡಿದ್ದಾರೆ.

ಮಿಸೈಲ್ ದಾಳಿ ಆದ ಜಾಗ 200 ಕಿ.ಮೀ ದೂರದಲ್ಲಿ ಇದೆ. ಭಾರತೀಯ ರಾಯಭಾರಿ ಕಚೇರಿ ಅವರ ಸಂಪರ್ಕದಲ್ಲಿ ಇದೆ. ಆದಷ್ಟು ಶೀಘ್ರ ಬೇರೆ ಕಡೆ ಕರೆದುಕೊಂಡು ಹೋಗುವ ಭರವಸೆ ನೀಡಿದ್ದಾರೆ. ಸರ್ಕಾರ ದಯವಿಟ್ಟು ಆದಷ್ಟು ಬೇಗ ನಮ್ಮ ಮಗನನ್ನ ಕರೆ ತರಲಿ. ಡಿ.ಸಿ ಗೆ ಸಂಪರ್ಕ ಮಾಡಿದ್ದೇವೆ, ದಯವಿಟ್ಟು ಇಲ್ಲಿಗೆ ಕರೆದು ಕೊಂಡು ಬನ್ನಿ ಎಂದು ತಾಯಿ ವಿನಂತಿಸಿಕೊಳ್ಳುತ್ತಿದ್ದಾರೆ.

Edited By : Nagesh Gaonkar
PublicNext

PublicNext

24/02/2022 09:54 pm

Cinque Terre

42.39 K

Cinque Terre

4

ಸಂಬಂಧಿತ ಸುದ್ದಿ