ಮಂಗಳೂರು : ಮಂಗಳೂರು ನಗರದ ಜೆಪ್ಪುವಿನ ಸಂತ ಆಂತೋನಿ ಆಶ್ರಮದಲ್ಲಿ 125ನೇ ವರ್ಷದ ಸಾಮೂಹಿಕ ವಿವಾಹ ಸಮಾರಂಭ ನಡೆಯಿತು.
ಒಟ್ಟು 20 ಜೋಡಿ ವಿವಾಹದಲ್ಲಿ ಹಸೆಮಣೆ ಏರಿದ್ದಾರೆ. ಪ್ರತಿಯೊಬ್ಬ ವಧು-ವರರಿಗೆ ಮದುವೆಯ ಉಂಗುರ, ವಧುವಿಗೆ ಮದುವೆಯ ಸೀರೆ ಮತ್ತು ತಾಳಿ, ವರನಿಗೆ ಪ್ಯಾಂಟ್ ಮತ್ತು ಶರ್ಟ್ ಹಾಗೂ ನವ ದಂಪತಿಗೆ ದಿನ ನಿತ್ಯ ಬಳಕೆಗೆ ಉಪಯೋಗವಾಗಲಿರುವ 15,000 ರೂಪಾಯಿ ಮೌಲ್ಯದ ವಸ್ತುಗಳನ್ನು ನೀಡಲಾಯಿತು.
ಪ್ರತಿಯೊಬ್ಬ ವರ ಮತ್ತು ವಧು ತಮ್ಮ ಕಡೆಯಿಂದ 30 ಮಂದಿಯನ್ನು ಮದುವೆಯ ಕಾರ್ಯಕ್ರಮಕ್ಕೆ ಆಹ್ವಾನಿಸಲು ಅವಕಾಶ ನೀಡಲಾಗಿತ್ತು.
ಶಿವಮೊಗ್ಗದ ಧರ್ಮಾಧ್ಯಕ್ಷ ಡಾ.ಫ್ರಾನ್ಸಿಸ್ ಸೆರಾವೊ ಅವರು ಬಲಿಪೂಜೆಯ ನೇತೃತ್ವ ವಹಿಸಿದ್ದರು. ಮಾಜಿ ಶಾಸಕ ಜೆ. ಆರ್. ಲೋಬೊ ಅವರು ನವ ದಂಪತಿಗಳಿಗೆ ಶುಭ ಹಾರೈಸಿದರು.
Kshetra Samachara
23/02/2022 01:31 pm