ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮರಕಡ ಮಠದ ಶ್ರೀ ನರೇಂದ್ರನಾಥ ಸ್ವಾಮೀಜಿ ವಿಧಿವಶ

ಮಂಗಳೂರು: ನಗರದ ಮರಕಡ ಶ್ರೀ ಗುರು ಪರಾಶಕ್ತಿ ಮಠದ ಶ್ರೀ ನರೇಂದ್ರನಾಥ ಸ್ವಾಮೀಜಿ ಹೃದಯಾಘಾತದಿಂದ ನಿಧನರಾದರು.

28 ವರ್ಷಗಳ ಹಿಂದೆ ತಮ್ಮ ಸಂಬಂಧಿಕರೊಬ್ಬರ ಮನೆಯನ್ನೇ ಮಠವಾಗಿ ಪರಿವರ್ತಿಸಿ, ಮರಕಡದಲ್ಲಿ ಶ್ರೀ ಗುರು ಪರಾಶಕ್ತಿ ಕ್ಷೇತ್ರವನ್ನು ಸ್ಥಾಪಿಸಿದ್ದರು.

ಶ್ರೀ ನರೇಂದ್ರನಾಥ ಸ್ವಾಮೀಜಿಯವರಿಗೆ ನಿನ್ನೆ ಹೃದಯಾಘಾತ ಸಂಭವಿಸಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾದರು. ಅವರ ಪಾರ್ಥಿವ ಶರೀರವನ್ನು ಇಂದು ಮಧ್ಯಾಹ್ನ 2.30ರ ವರೆಗೆ ಮರಕಡದ ಮಠದಲ್ಲಿ ಮತ್ತು 3 ಗಂಟೆಯಿಂದ 5ರ ವರೆಗೆ ಮಡ್ಯಾರ್​ ಶ್ರೀ ಆದಿ ಪರಾಶಕ್ತಿ ಕ್ಷೇತ್ರದಲ್ಲಿ ಭಕ್ತರ ದರ್ಶನಕ್ಕೆ ಇಡಲಾಗುವುದು. ಬಳಿಕ ಅಲ್ಲಿಯೇ ಅಂತ್ಯ ಸಂಸ್ಕಾರ ನಡೆಯಲಿದೆ.

ರಾಮಕ್ಷತ್ರೀಯ ಮನೆತನದ ಗಣಪತಿ- ಸಾವಿತ್ರಿ ದಂಪತಿ ಪುತ್ರನಾಗಿ ಜನಿಸಿದ ಇವರು, ಪೂರ್ವಾಶ್ರಮದಲ್ಲಿ ಇಂಜಿನಿಯರಿಂಗ್ ವೃತ್ತಿ ನಿರ್ವಹಿಸುತ್ತಿದ್ದರು. ಬಳಿಕ ಸಾಂಸಾರಿಕ ಜೀವನದಲ್ಲಿದ್ದವರು ದೈವೀಕತೆಯತ್ತ ವಾಲಿದರು. ಶ್ರೀ ಕ್ಷೇತ್ರ ಮರಕಡವನ್ನು ನಿರ್ಮಿಸಿ ದೈವಿಕ, ಸಾಮಾಜಿಕ ಕಾರ್ಯಗಳನ್ನು ನಿರಂತರ ನಡೆಸುತ್ತಾ ಬಂದಿದ್ದರು.

Edited By : Nirmala Aralikatti
Kshetra Samachara

Kshetra Samachara

27/01/2022 01:38 pm

Cinque Terre

6.26 K

Cinque Terre

2

ಸಂಬಂಧಿತ ಸುದ್ದಿ