ಉಡುಪಿ: :ಸ್ವಂತ ಮಗನೇ ತಂದೆಯನ್ನು ಫುಟ್ ಪಾತಲ್ಲಿ ಬಿಟ್ಟು ಹೋದ ಮನಕಲಕುವ ವ್ಯಥೆ ಇದು. ಉಡುಪಿಯಲ್ಲಿರುವ ಕೆಲವೇ ಕೆಲವು ಸಮಾಜಸೇವಕರ ಮಾನವೀಯತೆಯಿಂದಾಗಿ ಇಂತಹ ಘಟನೆಗಳು ನಾಗರೀಕ ಸಮಾಜಕ್ಕೆ ಗೊತ್ತಾಗುತ್ತಿವೆ.
ಈ ವಯೋವೃದ್ಧರ ಹೆಸರು ತಿಮ್ಮಪ್ಪ(85), ಶಿವಮೊಗ್ಗದ ಶಿಕಾರಿಪುರು.ಮಂಜ ಎಂಬ ಪಾಪಿ ಮಗ ತಂದೆಯನ್ನು ಉಡುಪಿ ನಗರದ ಕಲ್ಸಂಕದಲ್ಲಿ ಬಿಟ್ಟು ಹೋಗಿದ್ದಾನೆ! 2 ಹೆಣ್ಣು ಹಾಗೂ 2 ಗಂಡು ಮಕ್ಕಳಿರುವ ಈ ವೃದ್ಧರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದನ್ನು ಸಮಾಜಸೇವಕ ವಿಶು ಶೆಟ್ಟಿ ಗಮನಿಸಿದ್ದಾರೆ.
ಕಲ್ಸಂಕ ಮುಖ್ಯ ರಸ್ತೆಯಲ್ಲಿ ಮಗ ಬಿಟ್ಟು ಹೋದ ಕಾರಣ ನಿತ್ರಾಣದಿಂದ ಅಸಹಾಯಕರಾಗಿ ಕುಳಿತ ಇವರ ಹಣೆಯಲ್ಲಿ ಬಿದ್ದ ಗಾಯದಿಂದ ರಕ್ತ ಸ್ರಾವವಾಗಿತ್ತು! ವಿಶು ಶೆಟ್ಟಿ ತಮ್ಮ ವಾಹನದಲ್ಲಿ ಕಾರ್ಕಳದ ಬೈಲೂರಿನ ಗಂಗೋತ್ರಿ ಹಿರಿಯ ನಾಗರಿಕರ ಆಶ್ರಮಕ್ಕೆ ದಾಖಲಿಸಿ ಮಾನವೀಯತೆ ಮೆರೆದರು.ಸಂಬಂಧಿಕರು ಹಿರಿಯ ನಾಗರಿಕ ಸಹಾಯವಾಣಿ 0820-2526394 ಸಂಪರ್ಕಿಸುವಂತೆ ವಿಶು ಶೆಟ್ಟಿ ವಿನಂತಿಸಿದ್ದಾರೆ.
PublicNext
15/01/2022 09:35 pm