ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

"ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್" ಗೆ ಮಣಿಪಾಲದ ಸುರೇಶ್ ಶೆಣೈ

ಮಣಿಪಾಲ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಮಾನವ ಸಂಪನ್ಮೂಲ ವಿಭಾಗದ ಚೀಫ್ ಮ್ಯಾನೇಜರ್ ಸುರೇಶ್ ಶೆಣೈ ತಮ್ಮ ವಿಶಿಷ್ಟ ಪ್ರತಿಭೆ ಮೂಲಕ "ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್" ನಲ್ಲಿ ತಮ್ಮ ಸಾಧನೆಯನ್ನು ದಾಖಲಿಸಿದ್ದಾರೆ.

ಭಾರತದಲ್ಲಿ ಬಣ್ಣ ಬಳಸದೆ ಹಳೆಯ ಮ್ಯಾಗಝೀನ್ ಕಾಗದಗಳನ್ನು ಬಳಸಿ ತಯಾರಿಸುವ ಚಿತ್ರಗಾರಿಕೆಯಾಗಿರುವ Collage Art- Painting without Paint ಗರಿಷ್ಟ ಚಿತ್ರಗಾರಿಕೆ ಮಾಡಿರುವ ಬಗ್ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಆಯ್ಕೆಯಾಗಿ ಸಾಧನೆ ಮಾಡಿದ್ದಾರೆ.

ಬಣ್ಣ ಬಳಸದೆ ಹಳೆಯ ಮ್ಯಾಗಝೀನ್ ಕಾಗದಗಳ ಮೂಲಕ ಚಿತ್ರ ಸೃಷ್ಟಿಸುವ ಕಲೆಯನ್ನು ಅವರು ತಂದೆ ದಿವಂಗತ ಕೆಪಿ ಶೆಣೈ ಅವರಿಂದ ಕಲಿತಿದ್ದರು. ಈ ವಿಶಿಷ್ಟ ಚಿತ್ರಗಾರಿಕೆಯು ಮೂರು ಆಯಾಮಗಳುಳ್ಳ ಪ್ರಭಾವದಂತೆ ಗೋಚರಿಸುವ ಚಿತ್ರ ಕಲೆಯಾಗಿದ್ದು ಇದನ್ನು ಮತ್ತೊಮ್ಮೆ ಯಾರು ಕೂಡ ಕಾಪಿ ಮಾಡಲು ಸಾಧ್ಯವಿಲ್ಲ. ಇದನ್ನು ಮರುಸೃಷ್ಟಿಸಲು ಮೂಲ ಕಲಾವಿದನಿಂದಲೂ ಕೂಡ ಅಸಾಧ್ಯ.

ಸುರೇಶ್ ಶಣೈ ತಮ್ಮ ಈ ಅಪರೂಪದ ಪ್ರತಿಭೆಗಾಗಿ ಇಂಡಿಯಾ ಬುಕ್ ಅಫ್ ರೆಕಾರ್ಡ್ಸ್ ನಲ್ಲಿ ತಮ್ಮ ಹೆಸರನ್ನು ಅಚ್ಚಾಗಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

12/01/2022 05:13 pm

Cinque Terre

5.21 K

Cinque Terre

0

ಸಂಬಂಧಿತ ಸುದ್ದಿ