ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಅನಾಗರಿಕ ಬದುಕು ನಡೆಸುತ್ತಿದ್ದಾತನಿಗೆ "ಹೊಸಬೆಳಕು"

ಹೂಡೆ: ಉಡುಪಿ ತಾಲೂಕಿನ ಕೆಮ್ಮಣ್ಣು- ಹೂಡೆ ಪರಿಸರದಲ್ಲಿ ಅನಾಗರಿಕ ಬದುಕು ಸಾಗಿಸುತ್ತಿದ್ದ ವ್ಯಕ್ತಿಯನ್ನು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ರಕ್ಷಿಸಿ, ಮಣಿಪಾಲದ ಹೊಸಬೆಳಕು ಆಶ್ರಮದಲ್ಲಿ ದಾಖಲಿಸಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಘದ ಸದಸ್ಯರು ಸಮಿತಿಗೆ ಮಾಹಿತಿ ನೀಡಿದ್ದರು. ಹೊಸಬೆಳಕು ಆಶ್ರಮವು ಅಸಹಾಯಕ ವ್ಯಕ್ತಿಗೆ ಆಶ್ರಯ ಒದಗಿಸಿ, ನೊಂದ ವ್ಯಕ್ತಿಯ ಬಾಳಲ್ಲಿ ಹೊಸಬೆಳಕು ಮೂಡಿಸಿದೆ.

ವ್ಯಕ್ತಿಯು ವಿಚಾರಣೆಗೆ ಸ್ಪಂದಿಸದೆ ಇರುವುದರಿಂದ ಹೆಸರು ವಿಳಾಸ ತಿಳಿದು ಬಂದಿಲ್ಲ. ಸಂಬಂಧಿಕರು ಉಡುಪಿ ಜಿಲ್ಲಾ ನಾಗರಿಕ ಸಮಿತಿಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.

Edited By : Manjunath H D
Kshetra Samachara

Kshetra Samachara

04/01/2022 01:28 pm

Cinque Terre

7.9 K

Cinque Terre

1

ಸಂಬಂಧಿತ ಸುದ್ದಿ