ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ನಾನಾ ಕಡೆ ಸಮರ ಸೇನಾನಿಗಳಿಗೆ ನಮನ, ಶ್ರದ್ಧಾಂಜಲಿ ಸಭೆ

ಬೈಂದೂರು: ಬೈಂದೂರು ಹಿಂದೂ ಜಾಗರಣ ವೇದಿಕೆ ತಾಲೂಕು ವತಿಯಿಂದ ಇಂದು ಶಿರೂರು ಶ್ರೀ ವನದುರ್ಗಾ ದೇವಸ್ಥಾನದ ಆವರಣದಲ್ಲಿ ಅಗಲಿದ ಸಮರ ಸೇನಾನಿಗಳಿಗೆ ದೀಪ ಬೆಳಗಿಸಿ, ಪುಷ್ಪಾರ್ಚನೆ ಮಾಡಲಾಯಿತು.

ಈ ಸಂದರ್ಭ ಆರೆಸ್ಸೆಸ್ ನ ನವೀನ್ ಚಂದ್ರ ಉಪ್ಪುಂದ ಮಾತನಾಡಿ, ವೀರ ಸೈನಿಕರ ಸಾವನ್ನು ಸಂಭ್ರಮಿಸುವ ದುಷ್ಕರ್ಮಿಗಳ ವಿರುದ್ಧ ಸರಕಾರ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಹಿಂಜಾವೇ ಬೈಂದೂರು ತಾಲೂಕು ಪ್ರಧಾನ ಕಾರ್ಯದರ್ಶಿ ನವೀನ್ ಗಂಗೊಳ್ಳಿ, ತಾಲೂಕು ಸಂಪರ್ಕ ಪ್ರಮುಖ್ ಅಕ್ಷಯ್ ತಗ್ಗರ್ಸೆ, ವೇದನಾಥ್ ಹೆರಂಜಾಲು ಮತ್ತಿತರರು ಉಪಸ್ಥಿತರಿದ್ದರು.

ಗಂಗೊಳ್ಳಿ, ಬಾಳಿಕೇರಿ, ಹೆರಂಜಾಲು, ಮಾಣಿಕೊಳಲು, ನಾಡ ಗುಡ್ಡೆಅಂಗಡಿ ಇತ್ಯಾದಿ ಕಡೆ ಹಿಂಜಾವೇ ವತಿಯಿಂದ ಶ್ರದ್ಧಾಂಜಲಿ ಸಭೆ ನಡೆಯಿತು.

Edited By : Shivu K
Kshetra Samachara

Kshetra Samachara

12/12/2021 10:04 pm

Cinque Terre

20.7 K

Cinque Terre

0

ಸಂಬಂಧಿತ ಸುದ್ದಿ