ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಗ್ಗರಿಸಿ ಬಿದ್ದರೂ ಛಲ ಬಿಡದ ಓಟಗಾರ, ಕಂಬಳದಲ್ಲೊಂದು ರೋಮಾಂಚಕಾರಿ ಸನ್ನಿವೇಶ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಕಂಬಳ ಎಂಬ ಹೆಗ್ಗಳಿಕೆಗೆ ಪಾತ್ರವಾದ ಬಂಟ್ವಾಳ ತಾಲೂಕಿನ ಹೊಕ್ಕಾಡಿಗೋಳಿಯಲ್ಲಿ ನಡೆದ ವೀರ ವಿಕ್ರಮ ಜೋಡುಕರೆ ಕಂಬಳ ರೋಮಾಂಚಕಾರಿ ಘಟನೆಗೂ ಸಾಕ್ಷಿಯಾಯಿತು. ಕಂಬಳ ಕರೆ (ಓಟದ ಜಾಗ)ಯಲ್ಲಿ ಕೋಣಗಳನ್ನು ಓಡಿಸುವ ಸಂದರ್ಭ ಓಟಗಾರ ಬಿದ್ದರೂ ಛಲ ಬಿಡಲಿಲ್ಲ. ಅವರು ಹಗ್ಗ ಬಿಡಲಿಲ್ಲ, ಕೋಣಗಳು ಓಟಗಾರನನ್ನು ಎಳೆದೊಯ್ಯುತ್ತಾ, ತನ್ನ ಓಟವನ್ನೂ ಬಿಡಲಿಲ್ಲ. ಈ ರೀತಿಯಾಗಿ ಸುಮಾರು 20 ಮೀಟರ್ ನಷ್ಟು ದೂರ ಕವುಚಿ ಬಿದ್ದರೂ ಹಗ್ಗ ಹಿಡಿದು ಗುರಿ ಮುಟ್ಟಿದ ಓಟಗಾರ ಆಕಾಶ್ ಸಾಹಸ ಈಗ ಕಂಬಳಪ್ರಿಯರ ಮನೆಮಾತಾಯಿತು.

ಇತಿಹಾಸ ಪ್ರಸಿದ್ಧ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳದಲ್ಲಿ ನಡೆದ ಘಟನೆ ಪ್ರಸ್ತುತ ವೈರಲ್ ಆಗುತ್ತಿದೆ. ಹಗ್ಗದ ಕಿರಿಯ ವಿಭಾಗದಲ್ಲಿ , ಪ್ರಿ ಕ್ವಾರ್ಟರ್ ಫೈನಲ್ ಸಂದರ್ಭದಲ್ಲಿ ಬಿಳಿಯೂರು, ಪೆರ್ನೆ ವಿಷ್ಣುಮೂರ್ತಿ ದೇವತಾ ಗಣಪ ಭಂಡಾರಿ ಅವರ ಕೋಣಗಳನ್ನು ಉಡುಪಿ ಹಿರೇಬೆಟ್ಟು ಆಕಾಶ್ ಭಂಡಾರಿ ಅವರು ಓಡಿಸುತ್ತಿದ್ದು, ಕರೆಯನ್ನು ಮುಕ್ಕಾಲು ಭಾಗ ಕ್ರಮಿಸುವಾಗ ಬಿದ್ದರು. ಆದರೆ ಹಗ್ಗವನ್ನು ಬಿಡದೇ ಕೋಣಗಳು ಎಳೆದೊಯ್ಯುತ್ತಿದ್ದರೂ ಛಲದಿಂದ ಗುರಿ ಮುಟ್ಟಿದರು. ಸುಮಾರು 20 ಮೀ.ನಷ್ಟು ದೂರ ಕವುಚಿ ಬಿದ್ದರೂ ಹಗ್ಗ ಹಿಡಿದು ಗುರಿ ಮುಟ್ಟಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

06/12/2021 05:54 pm

Cinque Terre

11.91 K

Cinque Terre

1

ಸಂಬಂಧಿತ ಸುದ್ದಿ