ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಂಗೊಳ್ಳಿ: ದಾರಿ ತಪ್ಪಿ ಬಂದ ಅಜ್ಜನನ್ನು ಮರಳಿ ಮನೆ ಸೇರಿಸಿದ ಪೊಲೀಸರು

ವರದಿ: ದಾಮೋದರ ಮೊಗವೀರ, ನಾಯಕವಾಡಿ

ಗಂಗೊಳ್ಳಿ: ಭಟ್ಕಳ - ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರ ಮರವಂತೆ ಬೀಚ್ ಬಳಿಯ ಶ್ರೀ ವರಾಹ ಮಹಾರಾಜ ಸ್ವಾಮಿ ದೇವಸ್ಥಾನ ಹತ್ತಿರ ಇಂದು ಮಧ್ಯಾಹ್ನ ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ನಂಜು ನಾಯ್ಕ್ ಗಸ್ತು ತಿರುಗುತ್ತಿದ್ದ ವೇಳೆ ಅಪರಿಚಿತ ವೃದ್ಧರೊಬ್ಬರನ್ನು ಕಂಡು ಅನುಮಾನದಿಂದ ವಿಚಾರಿಸಿದಾಗ ದಾರಿ ತಪ್ಪಿ ಬಂದ ವಿಷಯ ತಿಳಿಯಿತು.

ಆ ಕೂಡಲೇ ಠಾಣಾಧಿಕಾರಿ ನಂಜು ನಾಯ್ಕ್ ಹಾಗೂ ಜೀಪ್ ಚಾಲಕ ದಿನೇಶ್ ಅವರು ವೃದ್ಧರನ್ನು ಅವರ ಮನೆ ಸೇರಿಸಲು ವಿಳಾಸ ವಿಚಾರಿಸಿದಾಗ ಆಗ ಸರಿಯಾದ ವಿಳಾಸ ಸಿಗದ ಕಾರಣ ಪೊಲೀಸ್ ಸಿಬ್ಬಂದಿ ರವಿಚಂದ್ರ ಪೂಜಾರಿ, ತಮಗೆ ತಿಳಿದವರ ಫೋನ್ ನಂಬರಿಗೆ ಹಾಗೂ ವಾಟ್ಸ್ ಆ್ಯಪ್ ಮೂಲಕ ವಾರೀಸುದಾರರ ಮಾಹಿತಿ ಕಲೆ ಹಾಕಿದರು.

ಸರಿಸುಮಾರು 1 ಗಂಟೆಯ ಸತತ ಪ್ರಯತ್ನದಿಂದ ವೃದ್ಧರ ಮನೆ ಹಾಗೂ ಸಂಬಂಧಿಗಳ ವಿಳಾಸ ಪತ್ತೆ ಹಚ್ಚಿ, ಮನೆಯವರನ್ನು ಠಾಣೆಗೆ ಕರೆಸಿ ವೃದ್ಧರನ್ನು ಮರಳಿ ಮನೆ ಸೇರಿಸಿದರು.

ಪೊಲೀಸರ ಈ ಮಾನವೀಯ ಕೈಂಕರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

02/12/2021 09:53 pm

Cinque Terre

15.28 K

Cinque Terre

0

ಸಂಬಂಧಿತ ಸುದ್ದಿ