ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಗೋಡೆ ಸಂದಿನಲ್ಲಿ ಗೋ ಮಾತೆ ಬಂಧಿ!; ಸುರಕ್ಷಿತ ಬಿಡುಗಡೆ

ಮಣಿಪಾಲ: ಮನೆಯೊಂದರ ಗೋಡೆ ಮತ್ತು ಕಂಪೌಂಡ್ ವಾಲ್ ಮಧ್ಯೆ ಸಿಲುಕಿ ಒದ್ದಾಡುತ್ತಿದ್ದ ದನವನ್ನು ಭಾರಿ ಕಾರ್ಯಾಚರಣೆ ಮೂಲಕ ಅಗ್ನಿಶಾಮಕ ದಳ ಮತ್ತು ಜಿಲ್ಲಾ ನಾಗರಿಕ ಸಮಿತಿ ಕಾರ್ಯಕರ್ತರು ಸೇಫಾಗಿ ಹೊರತೆಗೆದ ಘಟನೆ ಮಣಿಪಾಲದಲ್ಲಿ ನಡೆದಿದೆ.

ಮಣಿಪಾಲದ ಆರ್ ಎಸ್ ಬಿ ಸಭಾಭವನದ ಹಿಂಭಾಗದ ಮನೆಯ ಎರಡು ಗೋಡೆಗಳ ಸಂದಿನಲ್ಲಿ ಈ ದನ ಆಹಾರ ಅರಸಿ ಹೋಗಿತ್ತು. ತುಂಬಾ ಇಕ್ಕಟ್ಟಾದ ಜಾಗಕ್ಕೆ ಹೋಗಿ ಹೊರಬರಲಾಗದೆ ಒದ್ದಾಡುತ್ತಿದ್ದ ಸಂಗತಿ ತಿಳಿದು ಅಗ್ನಿಶಾಮಕ ಸಿಬ್ಬಂದಿ ಧಾವಿಸಿದ್ದಾರೆ. ದೊಡ್ಡ ಗಾತ್ರದ ಡ್ರಿಲ್ಲಿಂಗ್ ಮೆಷಿನ್ ಬಳಸಿ ದನ ಸುರಕ್ಷಿತವಾಗಿ ಹೊರ ಬರಲು ಜಾಗ ಮಾಡಿ ಕೊಡಲಾಯಿತು.

ಜಿಲ್ಲಾ ನಾಗರಿಕ ಸಮಿತಿ ಹಾಗೂ ಅಗ್ನಿಶಾಮಕ ದಳದ ತ್ವರಿತಗತಿಯ ಜಂಟಿ ಕಾರ್ಯಾಚರಣೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ಈ ರಕ್ಷಣಾ ಕಾರ್ಯದಲ್ಲಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಸಂತ ಕುಮಾರ್, ಅಗ್ನಿಶಾಮಕ ಠಾಣಾಧಿಕಾರಿ ಸತೀಶ್ ಎನ್. ಹಾಗೂ ಸಿಬ್ಬಂದಿ, ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಭಾಗಿಯಾಗಿದ್ದರು. ಬಳಿಕ ಪಶುವೈದ್ಯ ಡಾ.ಪ್ರಶಾಂತ್ ಶೆಟ್ಟಿ ಗೋವಿಗೆ ಚಿಕಿತ್ಸೆ ನೀಡಿದರು.

Edited By : Manjunath H D
Kshetra Samachara

Kshetra Samachara

26/11/2021 11:40 am

Cinque Terre

12.38 K

Cinque Terre

0

ಸಂಬಂಧಿತ ಸುದ್ದಿ