ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಕೊರಗ ಸಮುದಾಯದ ಪೌರ ಕಾರ್ಮಿಕನಿಗೆ ಕಿಡ್ನಿ ವೈಫಲ್ಯ:ಬೇಕಿದೆ ದಾನಿಗಳ ನೆರವು

ಮಲ್ಪೆ: ಮಲ್ಪೆಯ ಸಿಟಿ ಬಸ್ ಸರ್ಕಲ್ ನಿವಾಸಿ ಕೊರಗ ಸಮಾಜದ ಯುವಕ ಸುನಿಲ್(27 ) ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ. ಕಡು ಬಡತನದ ಇವರ ಕುಟುಂಬಕ್ಕೆ ಸಮಾಜಸೇವಕ ವಿಶು ಶೆಟ್ಟಿ 10000/- ಹಾಗೂ ಆಶಾ ಅಡ್ಯಂತಾಯ ಅಜ್ಜರಕಾಡು ರೂ. 15000 ತುರ್ತು ಸಹಾಯ ನೀಡಿ ಮಾನವೀಯತೆ ಮೆರೆದಿದ್ದಾರೆ.

ಸುನಿಲ್ ಕಳೆದ 8 ವರ್ಷಗಳಿಂದ ನಗರಸಭೆಯಲ್ಲಿ ಪೌರ ಕಾರ್ಮಿಕನಾಗಿ ದುಡಿಯುತ್ತಿದ್ದು ಕಳೆದ 2 ತಿಂಗಳಿನಿಂದ ಕಿಡ್ನಿ ವೈಫಲ್ಯಕ್ಕೀಡಾಗಿ ಹಾಸಿಗೆ ಹಿಡಿದಿದ್ದಾರೆ. ತಾತ್ಕಾಲಿಕ ನೆಲೆಯಲ್ಲಿರುವ ಕೆಲಸ ಕಳೆದುಕೊಂಡು ಯಾವುದೇ ವೇತನ ಬರುತ್ತಿಲ್ಲ. ಕುಟುಂಬದ ಆಧಾರವಾಗಿದ್ದ ಯುವಕ ಹಾಸಿಗೆ ಹಿಡಿದಿರುವುದರಿಂದ ಬೇರೆ ಯಾವುದೇ ಆದಾಯವಿಲ್ಲದೆ ಕುಟುಂಬ ಸಮಾಜದ ನೆರವು ಬಯಸಿದೆ. ರೋಗಿಗೆ ಮಲಗಲು ಹಾಸಿಗೆ ಮಂಚ ಇಲ್ಲದೆ, ನೆಲದಲ್ಲಿ ಚಾಪೆಯಲ್ಲಿಯೇ ಮಲಗಿದ್ದಾನೆ.

ವಾರಕ್ಕೆರಡು ಬಾರಿ ಡಯಾಲಿಸಿಸ್ ಗಾಗಿ ಕೆ ಎಂ ಸಿ ಆಸ್ಪತ್ರೆಯಲ್ಲಿ ಸರಕಾರದಿಂದ ಸಿಗುವ ಸೌಲಭ್ಯದಲ್ಲಿ ಉಚಿತವಾದರೆ, ಡಯಾಲಿಸಿಸ್ ಗೆ ತೆರಳಲು ರಿಕ್ಷಾ ಹಾಗೂ ಇತರ ಔಷಧಿ ಖರ್ಚು ಹಾಗೂ ಕುಟುಂಬದ ದೈನಂದಿನ ಖರ್ಚುಗಳಿಗಾಗಿ ಇದೀಗ ಸಾಲ ಮಾಡಬೇಕಾಗಿದೆ.ಕುಟುಂಬದ ಮುಂದಿನ ಜೀವನ ಅತಂತ್ರವಾಗಿದೆ.

ಸ್ಪಂದಿಸುವವರು ಸುನಿಲ್ ನ ಉಡುಪಿಯ ಯೂನಿಯನ್ ಬ್ಯಾಂಕ್ ಖಾತೆ 502402010004116

IFSC UBIN0550248 ಗೆ ನೀಡಬಹುದು. ಮೊಬೈಲ್ ಸಂಖ್ಯೆ 9686408197.

Edited By : Shivu K
Kshetra Samachara

Kshetra Samachara

09/11/2021 08:44 am

Cinque Terre

12.18 K

Cinque Terre

0

ಸಂಬಂಧಿತ ಸುದ್ದಿ