ಮಂಗಳೂರು: ದೀಪಾವಳಿ ಮಹಾ ಪರ್ವ ಸಂಭ್ರಮ- ಸಡಗರ ಕೇವಲ ಭಾರತಕ್ಕೆ ಮಾತ್ರ ಸೀಮಿತವಲ್ಲ, ಅದೀಗ ಇಡೀ ಜಗ ವ್ಯಾಪಿ, ಸರ್ವಜನ ಪ್ರಿಯ ಎಂಬುದರಲ್ಲಿ ಎರಡು ಮಾತಿಲ್ಲ.
ದೀಪಾವಳಿ ಎಂದಾಕ್ಷಣ ಕಣ್ಣ ಮುಂದೆ ಬರುವುದು ಮೊದಲು ಮನೆ ಮುಂದೆ ಹಣತೆ ದೀಪಗಳ ಸಾಲು ಸಾಲು, ಝಗಮಗಿಸುವ ಕಟ್ಟಡಗಳ ಸೊಬಗು ಜೊತೆಗೆ ಪಟಾಕಿ, ಸುರು ಸುರು ಕಡ್ಡಿ ಇತ್ಯಾದಿ ಬಣ್ಣ ಬಣ್ಣದ ಬೆಳಕು ಹೊರಹೊಮ್ಮಿಸುವ, ಮನಕ್ಕೆ ಮುದ ನೀಡಿ ಹಾಗೇ ಉರಿದು ಹೋಗುವ ಪಟಾಕಿ ವೈವಿಧ್ಯ.
ಈ ವೈರಲ್ ವೀಡಿಯೊದಲ್ಲಿ ವಯೋವೃದ್ಧೆಯೊಬ್ಬರು ನಿರ್ಭೀತಿ, ನಿರಾತಂಕವಾಗಿ ಹೇಗೆ ಪಟಾಕಿ ಸಿಡಿಸುತ್ತಿದ್ದಾರೆ ನೋಡಿ. ಇಲ್ಲಿ ಈ ಅಜ್ಜಿಯ ಜೀವನ ಪ್ರೀತಿ, ಉತ್ಸಾಹ ಎಳೆಯರಿಗೆ ಮಾದರಿ, ಪ್ರೇರಣೆ ಅಲ್ಲವೇ?
Kshetra Samachara
07/11/2021 10:59 am