ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಹಣತೆಯಂತೆ ಬೆಳಗಲಿ ರಕ್ಷಾ ಎಂಬ ವಿದ್ಯಾರ್ಥಿನಿಯ ಕನಸು!

ಕಾಪು: ದೀಪಾವಳಿಯ ಅಂದ ಹೆಚ್ಚಿಸುವುದು ಬಣ್ಣಬಣ್ಣದ ಹಣತೆಗಳು. ಸದ್ಯ ಮಾರುಕಟ್ಟೆಯಲ್ಲಿ ಬೇಡಿಕೆ ಇರೋ ಬಣ್ಣದ ಹಣತೆಗಳನ್ನು ತಯಾರಿಸಿ, ವಿದ್ಯಾರ್ಥಿನಿಯೊಬ್ಬಳು ಮನೆಗೆ ಆಸೆರೆಯಾಗುತ್ತಿದ್ದಾಳೆ. ಹಣತೆ ಬೆಳೆಗಿದಂತೆ ತನ್ನ ಜೀವನ ಬೆಳಗಬಹುದು ಎಂಬ ಕನಸು ಕಾಣುತ್ತಿದ್ದಾಳೆ.

ಈಕೆಯ ಹೆಸರು ರಕ್ಷಾ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕೊಪ್ಪಲಂಗಡಿ ನಿವಾಸಿ.ಸದ್ಯ ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಪೈನ್ ಆರ್ಟ್ಸ್ ಎರಡನೇ ವರ್ಷದ ವ್ಯಾಸಂಗ ಮಾಡುತ್ತಿರುವ ಈಕೆಗೆ ಬಾಲ್ಯದಿಂದಲೂ ಚಿತ್ರ ಬಿಡಿಸುವ ಹವ್ಯಾಸ.ಅಂಗವಿಕಲ ತಂದೆ, ಕೂಲಿ ಕೆಲಸ ಮಾಡೋ ತಾಯಿ.. ಕಾಲೇಜು ವ್ಯಾಸಂಗ ಮಾಡೋ ತಮ್ಮ... ಇವರೊಂದಿಗೆ ಬಾಡಿಗೆ ಮನೆಯಲ್ಲಿ ಬಡತನದ ಜೀವನ ನಡೆಸುವ ರಕ್ಷಾ, ತನ್ನ ವಿಶಿಷ್ಟ ಚಿತ್ರಕಲೆಯನ್ನೇ ಬಂಡವಾಳವಾಗಿಸಿ, ಹಣತೆಗಳಿಗೆ ಬಣ್ಣ ಬಳಿದು ಮಾರಾಟಕ್ಕೆ ಮುಂದಾಗಿದ್ದಾಳೆ. ಬೆಂಗಳೂರಿನಿಂದ ಕಚ್ಚಾ ವಸ್ತು ತರಿಸಿ, ಮನೆಯಲ್ಲೇ ಹಣತೆಗಳಿಗೆ ವಿವಿಧ ಬಣ್ಣ ಬಳಿದು, ಹಣತೆಗಳ ಮೆರುಗನ್ನು ಹೆಚ್ಚಿಸುತ್ತಿದ್ದಾಳೆ.

ಈಕೆಯ ಕೈ ಚಳಕದಿಂದ ಮೂಡಿ ಬರೋ ಬಣ್ಣ ಬಣ್ಣದ ಹಣತೆಗಳಿಗೆ, ಕರಾವಳಿ ಮಾತ್ರವಲ್ಲದೇ ಹೊರ ರಾಜ್ಯದಲ್ಲೂ ಬಾರೀ ಬೇಡಿಕೆ ಇದೆಯಂತೆ. ಹೀಗಾಗಿ ಸದ್ಯ ರಕ್ಷಾ ತುಂಬ ಬ್ಯುಸಿ.

ರಕ್ಷಾಳಿಗೆ ಸ್ವಂತ ಸೂರು ಕಟ್ಟಿಕೊಳ್ಳಬೇಕು ಎಂಬ ಕನಸಿದೆ, ಜೊತೆಗೆ, ಸ್ನಾತಕೋತ್ತರ ವಿದ್ಯಾಭ್ಯಾಸ ಮಾಡಬೇಕು ಅಂತ ಆಸೆ ಇದೆ. ಹೀಗಾಗಿ ರಾತ್ರಿ ಹಗಲೆನ್ನದೇ ಹಣತೆಗಳಿಗೆ ಚಿತ್ತಾರ ಬಿಡಿಸುತ್ತಿದ್ದಾರೆ ವಿದ್ಯಾಭ್ಯಾಸದ ಜೊತೆಗೆ, ತನ್ನ ವಿಶಿಷ್ಟ ಕಲೆಯನ್ನು ಬಳಸಿಕೊಂಡು ಮನೆಯವರಿಗೆ ನೆರವಾಗುವ ರಕ್ಷಾ ಯುವಜನತೆಗೂ ಮಾದರಿ. ದೀಪಾವಳಿಯಲ್ಲಿ ಬಣ್ಣ ಬಣ್ಣದ ಹಣತೆಗಳು ಬೆಳಗಿದಂತೆ, ಈಕೆಯ ಜೀವನವೂ ಬೆಳಗಲಿ ಎಂಬ ಹಾರೈಕೆ.

Edited By : Manjunath H D
Kshetra Samachara

Kshetra Samachara

01/11/2021 05:57 pm

Cinque Terre

37.16 K

Cinque Terre

0

ಸಂಬಂಧಿತ ಸುದ್ದಿ