ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮಹಿಳೆಗೆ ಸಹಾಯ ಹಸ್ತದ ಮೂಲಕ ಮಾನವೀಯತೆ

ಮಂಗಳೂರು: ಕಷ್ಟದಲ್ಲಿರುವ ಮಹಿಳೆಯೊಬ್ಬರಿಗೆ ಮುಲ್ಕಿಯ ಆಪದ್ಬಾಂಧವ ಆಸಿಫ್ ನೇತೃತ್ವದಲ್ಲಿ ದಾನಿಗಳ ಸಹಾಯ ಹಸ್ತದ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಮಂಗಳೂರಿನ ಮಹಿಳೆ ನಯನ ಪೂಜಾರಿ ಎಂಬವರು ತಮ್ಮ ಪತಿ ಅಸೌಖ್ಯ ದಲ್ಲಿರುವ ಕಾರಣ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸ್ ಮರಳುವ ವೇಳೆಯಲ್ಲಿ ಆಸ್ಪತ್ರೆಯ ಸಿಬ್ಬಂದಿ.25000 ರೂಪಾಯಿ ಬಿಲ್ ಮಾಡಿದ್ದು ಮಹಿಳೆಗೆ ಆಕಾಶವೇ ತಲೆ ಮೇಲೆ ಬಿದ್ದಂತಾಗಿ ಸಂಬಂಧಿಕರ ಬಳಿ ಕೇಳಿದರೂ ಹಣ ಹೊಂದಿಸಲು ಆಗಲಿಲ್ಲ.

ಕೂಡಲೇ ಅವರು ಮುಲ್ಕಿಯ ಕಾರ್ನಾಡು ಮೈಮುನಾ ಫೌಂಡೇಶನ್ ನಿರ್ದೇಶಕ ಅವರಿಗೆ ಕರೆ ಮಾಡಿ ತಮ್ಮ ಕಷ್ಟಗಳನ್ನು ತಿಳಿಸಿದಾಗ ಅವರು ಕಾರ್ಯಪ್ರವೃತ್ತರಾಗಿ ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮುಖಾಂತರ 13,000 ರೂ ಹಾಗೂ ಸೌದಿ ಅರೇಬಿಯಾದ ಉದ್ಯಮಿ ಶಿರ್ವ ಮೂಲದ ಎಂಬವರು 10, 000ರೂ ಮತ್ತು . 2100ರೂ ಗೂಗಲ್ ಪೇ ಮುಖಾಂತರ ಸಂಗ್ರಹಿಸಿ ಮಹಿಳೆ ನಯನ ಪೂಜಾರಿಯವರಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.

ಕಷ್ಟದಲ್ಲಿದ್ದ ತನಗೆ ಸಹಾಯ ಮಾಡಿದ ಎಲ್ಲರಿಗೂ ಮಹಿಳೆ ಕೃತಜ್ಞತೆ ಸಲ್ಲಿಸಿದ್ದಾರೆ

Edited By : Shivu K
Kshetra Samachara

Kshetra Samachara

24/10/2021 10:35 pm

Cinque Terre

18.72 K

Cinque Terre

10

ಸಂಬಂಧಿತ ಸುದ್ದಿ