ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಸಾಮಾಜಿಕ ಕಾರ್ಯಕರ್ತರಿಂದ ನಾಲ್ಕು ಅನಾಥ ಶವಗಳ ಅಂತ್ಯಸಂಸ್ಕಾರ

ಉಡುಪಿ: ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿಡಲಾಗಿದ್ದ ನಾಲ್ಕು ಅನಾಥ ಶವಗಳ ಅಂತ್ಯಸಂಸ್ಕಾರವನ್ನು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು, ಕಾನೂನು ಪ್ರಕ್ರಿಯೆಗಳು ನಡೆದ ಬಳಿಕ, ನಗರ ಪೊಲೀಸ್ ಠಾಣೆಯ ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ ಅಮಾಸೆಬೈಲು ಅವರ ಸಮಕ್ಷಮದಲ್ಲಿ ಬೀಡಿನಗುಡ್ಡೆ ಹಿಂದು ರುದ್ರಭೂಮಿಯಲ್ಲಿ ಗುರುವಾರ ದಫನ ಮಾಡುವ ಮೂಲಕ ಗೌರಯುತವಾಗಿ ಅಂತ್ಯಸಂಸ್ಕಾರ ನಡೆಸಿದದರು. ಹೊಸಬೆಳಕು ಆಶ್ರಮ ಸಂಚಾಲಕ ವಿನಯಚಂದ್ರ ಸಾಸ್ತಾನ, ಪ್ರದೀಪ್ ಅಜ್ಜರಕಾಡು, ರಾಮದಾಸ್ ಪಾಲನ್, ಮಂಜುನಾಥ್ ಬೈಲೂರು, ಸಾಜಿ ಕುಮಾರ್ ಅಜ್ಜರಕಾಡು, ಅಂತ್ಯಸಂಸ್ಕಾರ ಕಾರ್ಯದಲ್ಲಿ ಭಾಗಿಗಳಾದರು. ನಗರಸಭೆ, ಜಿಲ್ಲಾಸ್ಪತ್ರೆ, ಹಾಗೂ ಫ್ಲವರ್ ವಿಷ್ಣು, ಅಣ್ಣಪ್ಪ ಪೂಜಾರಿ ಕರಂಬಳ್ಳಿ,ಸುಶೀಲಾ ರಾವ್ ಉಡುಪಿ ಸಹಕರಿಸಿದರು.

ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವ ಅಪರಿಚಿತ ಮೂವರು ರೋಗಿಗಳ ಶವಗಳನ್ನು ಆಸ್ಪತ್ರೆಯ ಶೀತಲಿಕೃತ ಶವಗಾರದಲ್ಲಿ ರಕ್ಷಿಸಿಡಲಾಗಿತ್ತು. ಮೃತರ ವಾರಸುದಾರರ ಬರುವಿಕೆಗಾಗಿ ಮಾಧ್ಯಮ ಪ್ರಕಟಣೆಯನ್ನು ನೀಡಲಾಗಿತ್ತು. ಕಾಲಮಿತಿ ಕಳೆದರೂ ವಾರಸುದಾರರು ಆಸ್ಪತ್ರೆಯನ್ನು ಸಂಪರ್ಕಿಸದೆ ಇರುವುದರಿಂದ, ಎರಡು ಪುರುಷ ಶವ ಹಾಗೂ ಒಂದು ಮಹಿಳೆಯ ಶವವನ್ನು ಕಾನೂನಿನಂತೆ ಅಂತ್ಯಸಂಸ್ಕಾರ ನಡೆಸಲಾಯಿತು. ಹಾಗೆಯೇ ಅದರೊಂದಿಗೆ ಮಣಿಪಾಲ ಹೊಸಬೆಳಕು ಅನಾಥಾಶ್ರಮದಲ್ಲಿ ಆಶ್ರಯ ಪಡೆದಿದ್ದ ಅನಾಥ ವೃದ್ಧರೊರ್ವರು ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದರು. ವೃದ್ಧರ ವಾರಸುದಾರರು ಪತ್ತೆಯಾಗದೆ ಇರುವದರಿಂದ, ವೃದ್ಧರ ಶವವನ್ನು ಅಂತ್ಯಸಂಸ್ಕಾರ ನಡೆಸಲಾಯಿತು.

Edited By : Nagesh Gaonkar
Kshetra Samachara

Kshetra Samachara

30/09/2021 05:43 pm

Cinque Terre

10.59 K

Cinque Terre

0

ಸಂಬಂಧಿತ ಸುದ್ದಿ