ವರದಿ: ಮನೋಜ್ ಕೆ.ಬೆಂಗ್ರೆ, ಪಬ್ಲಿಕ್ ನೆಕ್ಸ್ಟ್
ಮಂಗಳೂರು: ಹಸಿ ಮೀನು ಮಾರಾಟ ಸಂದರ್ಭ ಕರಾವಳಿಗರ ನಾಡಿ ಮಿಡಿತಕ್ಕೆ ತಕ್ಕಂತೆ ಹಾಡು ಹಾಡಿ, 'ಶಹಬ್ಬಾಸ್ ಗಿರಿ' ಪಡೆದು ಕೊಂಡಿದ್ದ ರಾಮ್ ಸಾಲ್ಯಾನ್ ಅವರು, ಬಳಿಕ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಭಕ್ತಿಗೀತೆಯನ್ನು ಸುಶ್ರಾವ್ಯವಾಗಿ ಹಾಡಿ ಜನರಿಗೆ ಇನ್ನಷ್ಟು ಹತ್ತಿರವಾಗಿದ್ದರು.
ಇದೀಗ ಅದೇ ಮೀನು ಮಾರಾಟ ಕಾಯಕದ ಪ್ರತಿಭಾನ್ವಿತ ಗಾಯಕನ ಹಾಡಿನ ವೀಡಿಯೊ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿವೆ. ಕನ್ನಡ ಜಾನಪದ ಹಾಡೊಂದರ ಟ್ಯೂನ್ ನೆರವಿನ ಈ ಹಾಡಿನಲ್ಲಿ ಮತ್ಸ್ಯ ಸವಿರುಚಿಯ ಜೊತೆಗೆ ಮೀನು ಮಾರಾಟ ವೇಳೆ ಎದುರಾಗುವ ಕಷ್ಟ-ನಷ್ಟ ಅನಾವರಣಗೊಂಡಿದೆ.
Kshetra Samachara
24/09/2021 05:15 pm