ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಳಪ್ಪಬೈಲು:ಕುಟುಂಬಕ್ಕೆ ಮೂಲಸೌಕರ್ಯ ಕಲ್ಪಿಸಿ ಮಹಿಳೆಯ ಅಳಲು

ಬಜಪೆ: ಪಡು ಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕತ್ತಲ್ಸಾರ್ ಸಮೀಪದ ಬಾಳಪ್ಪಬೈಲು ಎಂಬಲ್ಲಿನ ಕುಟುಂಬವೊಂದು ಕಳೆದ ಹಲವು ವರ್ಷಗಳಿಂದ ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ.ಬಾಳಪ್ಪ ಬೈಲು ನಿವಾಸಿಯಾಗಿರುವ ವಾರಿಜ ಎಂಬವರ ಕುಟುಂಬಕ್ಕೆ ಕಳೆದ 75 ವರ್ಷಗಳಿಂದ ವಿದ್ಯುತ್ ಸಂಪರ್ಕ,ರಸ್ತೆ ಸಂಪರ್ಕ,ಶೌಚಾಲಯದ ವ್ಯವಸ್ಥೆ ಹಾಗೂ ನೀರಿನ ಸಂಪರ್ಕನೇ ಇಲ್ಲ.ಇವರ ಮನೆ ಕೂಡ ಗುಡ್ಡಗಳ ಸಮೀಪನೇ ಇದ್ದು,ಮನೆಯ ಸುತ್ತ ಮುತ್ತ ಕಾಡುಪ್ರಾಣೆಗಳ ಕಾಟವೂ ದಿನಂಪ್ರತಿಯೂ ಇದೆ ಎಂದು ಕುಟುಂಬವು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.ಮನೆಯಲ್ಲಿ ವಾಸಿಸುವ ಕುಟುಂಬವು ಇದೀಗ ಮೂಲ ಸೌಕರ್ಯಗಳು ಇಲ್ಲದೆ ಪರಿತಪಿಸುತ್ತಿದೆ.

ಈ ಬಗ್ಗೆ ಸಂಬಂಧ ಪಟ್ಟ ಪಡು ಪೆರಾರ ಗ್ರಾಮ ಪಂಚಾಯತ್ ಗೆ ಮನವಿಯನ್ನು ಕೂಡ ನೀಡಲಾಗಿದ್ದು,ಇದುವರೆಗೂ ಪಂಚಾಯತ್ ನಿಂದ ಯಾವುದೇ ಸ್ಪಂದನೆ ದೊರೆತಿಲ್ಲ ಅನ್ನುತ್ತಾರೆ ಈ ಕುಟುಂಬ.

Edited By : Nagesh Gaonkar
Kshetra Samachara

Kshetra Samachara

21/09/2021 05:24 pm

Cinque Terre

30.13 K

Cinque Terre

0

ಸಂಬಂಧಿತ ಸುದ್ದಿ