ಮುಲ್ಕಿ: ಮುಲ್ಕಿಯ ಆಟೋ ಚಾಲಕ ಮೊಹಮ್ಮದ್ ರಫೀಕ್(52) ಶನಿವಾರ ಸಂಜೆ ಬಪ್ಪನಾಡು ಬಳಿಯ ತಮ್ಮ ತಾಯಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಭಾನುವಾರ ಮುಲ್ಕಿ ಜನತೆ ಹಾಗೂ ಆಟೋ ಚಾಲಕರು ಅಂತಿಮ ನಮನ ಸಲ್ಲಿಸಿದರು.
ಮುಲ್ಕಿ ಪರಿಸರದಲ್ಲಿ ಜಾತಿ ಭೇದ ಮರೆತು ಎಲ್ಲರೊಂದಿಗೂ ಉತ್ತಮ ಒಡನಾಟ ಹೊಂದಿದ್ದ ಮೃತ ಆಟೋ ಚಾಲಕ ಮಹಮದ್ ರಫೀಕ್ ಗೌರವಾರ್ಥ ಆಟೋ ಚಾಲಕರು ಭಾನುವಾರ ಆಟೋಗೆ ಕಪ್ಪುಬಾವುಟದ ಮೂಲಕ ಸಂಚಾರ ಸ್ಥಗಿತಗೊಳಿಸಿದ್ದಾರೆ.
ಬಳಿಕ ಮೂಲ್ಕಿ ಸರಕಾರಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ಅಂತಿಮ ಮೆರವಣಿಗೆ ಮೂಲಕ ಮೃತ ಆಟೋ ಚಾಲಕ ಮೊಹಮ್ಮದ್ ರಫೀಕ್ ಅಪೇಕ್ಷೆಯಂತೆ ಮುಲ್ಕಿಯ ಹಿಂದೂ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನಡೆಸಲಾಯಿತು.
ಉದ್ಯಮಿ ಕಮಲಾಕ್ಷ ಬಡಗುಹಿತ್ಲು, ನಪಂ ಮಾಜೀ ಅಧ್ಯಕ್ಷ ಸುನಿಲ್ ಆಳ್ವ, ಸದಸ್ಯರಾದ ಬಾಲಚಂದ್ರ ಕಾಮತ್, ದಯಾನಂದ ಮಟ್ಟು, ಮುಲ್ಕಿ ಆಟೋ ಚಾಲಕರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ, ಮಾಜಿ ಅಧ್ಯಕ್ಷ ನಾಗರಾಜ ಕೊಲಕಾಡಿ ಮತ್ತಿತರರು ಅಂತಿಮ ನಮನ ಸಲ್ಲಿಸಿದರು.
Kshetra Samachara
19/09/2021 06:18 pm