ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರಸ್ತೆ ಬದಿ ಹಾಕಲಾಗಿದ್ದ ತ್ಯಾಜ್ಯಕಸ,ತಡರಾತ್ರಿ ತನಕ ನಿಂತು ತೆರವುಗೊಳಿಸಿದ ಗ್ರಾಂ.ಪ ಸದಸ್ಯೆ ರೆಹನಾ ಬಾನು

ಮಂಗಳೂರು: ಮಂಗಳೂರು ನಗರದ ಕುತ್ತಾರ್-ದೇರಳಕಟ್ಟೆ ಸಮೀಪದ ಮದನಿ ನಗರದ ಮೂರನೇ ಅಡ್ಡರಸ್ತೆಯ ಬಳಿ ರಾಶಿ ಹಾಕಲಾಗಿದ್ದ ತ್ಯಾಜ್ಯ ವಸ್ತುವನ್ನು ಮುನ್ನೂರು ಗ್ರಾಮದ 5 ನೇ ವಾರ್ಡಿನ ಸದಸ್ಯೆ ರೆಹನಾ ಬಾನು ಎಂಬುವವರು ತಡರಾತ್ರಿಯವರೆಗೂ ಸ್ವತಃ ನಿಂತು ಕಸವನ್ನು ತೆರವುಗೊಳಿಸಿದ್ದಾರೆ. ಯೆನೆಪೋಯ, ನಿಟ್ಟೆ, ಫಾದರ್ ಮುಲ್ಲರ್, ಕಣಚೂರು ಹೀಗೆ ನಾಲ್ಕು ಮೆಡಿಕಲ್ ಕಾಲೇಜು ಆಸ್ಪತ್ರೆಗಳಿಗೆ ತೆರಳುವ ಮದನಿ ನಗರ ಮುಖ್ಯ ರಸ್ತೆಯ ಬದಿಯಲ್ಲಿ ಕಳೆದೊಂದು ವಾರದಿಂದ ತ್ಯಾಜ್ಯ ವಸ್ತುಗಳು ರಾಶಿ ಬೀಳುತ್ತಿತ್ತು. ಇದರಿಂದ ಪರಿಸರ ಗಬ್ಬೆದ್ದು ನಾರುತಿತ್ತು.

ಕಾಲೇಜು, ಆಸ್ಪತ್ರೆಗೆ ಆಗಮಿಸುವ ಹೊರ ರಾಜ್ಯ, ಹೊರ ಜಿಲ್ಲೆಯ ಜನರು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಗ್ರಾಪಂಗೂ ಸಾರ್ವಜನಿಕರಿಂದ ದೂರು ಕೂಡ ನೀಡಲಾಗಿತ್ತು. ಅದರಂತೆ 5 ನೇ ವಾರ್ಡಿನ ಗ್ರಾಪಂ ಸದಸ್ಯೆ ರೆಹನಾ ಬಾನುರವರು ರಾತ್ರಿ ಜೆಸಿಬಿ ಬಳಸಿ ರಸ್ತೆ ಬದಿ ರಾಶಿ ಹಾಕಲಾಗಿದ್ದ ತ್ಯಾಜ್ಯವನ್ನು 5-6 ಟಿಪ್ಪರ್ ಮೂಲಕ ತಡರಾತ್ರಿಯವರೆಗೂ ಸ್ವತಃ ಸ್ಥಳದಲ್ಲಿ ನಿಂತು ತೆರವುಗೊಳಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

18/09/2021 06:43 pm

Cinque Terre

21.87 K

Cinque Terre

1

ಸಂಬಂಧಿತ ಸುದ್ದಿ