ಉಡುಪಿ: ಆಸ್ಕರ್ ಫೆರ್ನಾಂಡಿಸ್ ಅವರ ಮೃತದೇಹವನ್ನು ಇಂದು ಬೆಳಿಗ್ಗೆ ಉಡುಪಿಗೆ ತರಲಾಗಿದೆ. ಆಂಬುಲೆನ್ಸ್‌ನಲ್ಲಿ ಪಾರ್ಥಿವ ಶರೀರ ಚರ್ಚಿಗೆ ತರಲಾಗಿದ್ದ ಪಾರ್ಥಿವ ಶರೀರದ ಜೊತೆಗೆ ಆಸ್ಕರ್ ಅವರ ಪತ್ನಿ ಬ್ಲೋಸಂ ಫೆರ್ನಾಂಡಿಸ್, ಮಕ್ಕಳಾದ ಓಶನ್, ಒಶಾನಿ ಆಗಮಿಸಿದರು.
ಮಾಜಿ ಸಚಿವ ಯುಟಿ ಖಾದರ್, ದ.ಕ ಜಿಲ್ಲೆಯ ಹಲವಾರು ಗಣ್ಯರು, ಸಚಿವ ಕೋಟ ಸಹಿತ ಗಣ್ಯಾತಿಗಣ್ಯರು ಉಡುಪಿಯ
ಶೋಕಮಾತಾ ಚರ್ಚ್ ಗೆ ಆಗಮಿಸಿದ್ದಾರೆ.
ಉಡುಪಿ ಧರ್ಮಪ್ರಾಂತ್ಯದ ಗುರುಗಳಾದ ಜೆರಾಲ್ಡ್ ಐಸಾಕ್ ಲೋಬೋರಿಂದ ವಿಧಿವಿಧಾನಗಳು ನಡೆಯುತ್ತಿವೆ.
ಧರ್ಮಪ್ರಾಂತ್ಯದ ಸದಸ್ಯರಿಂದ ಸಾಮೂಹಿಕ ಪ್ರಾರ್ಥನೆ ನಡೆಯಿತು. ಧರ್ಮ ಗುರುಗಳಿಂದ ತೀರ್ಥ ಪ್ರೋಕ್ಷಣೆ ಬಳಿಕ
ಬಲಿ ಪೂಜೆ ನಡೆಸುವ ಮೂಲಕ ಸದ್ಗತಿಗಾಗಿ ಪ್ರಾರ್ಥನೆ ಮಾಡಲಾಯಿತು. 45 ನಿಮಿಷಗಳ ಕಾಲ ಪ್ರಾರ್ಥನೆ ನಡೆಯಲಿದೆ.
ಆಸ್ಕರ್ ಫೆರ್ನಾಂಡಿಸ್ ಕುಟುಂಬದ ಮೂಲ ಚರ್ಚ್ ಇದಾಗಿದ್ದು, ನಗರದ ಕವಿ ಮುದ್ದಣ ಮಾರ್ಗದಲ್ಲಿ ಈ ಶೋಕಮಾತಾ ಚರ್ಚ್ ಇದೆ.
Kshetra Samachara
14/09/2021 10:31 am