ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕೃಷ್ಣನಗರಿಯಲ್ಲೊಂದು ಮನ ಕಲಕುವ ಘಟನೆ! ಏಳು ವರ್ಷಗಳಿಂದ ಗೃಹಬಂಧನಲ್ಲಿದ್ದ ಮೂವರಿಗೆ ಬಿಡುಗಡೆ !

ಬ್ರಹ್ಮಾವರ: ಏಳು ವರ್ಷಗಳಿಂದ ಹೊರಪ್ರಪಂಚ ಕಾಣದೇ ಗೃಹಬಂಧನದಲ್ಲಿದ್ದ ಮೂವರನ್ನು ಸಮಾಜಸೇವಕರೊಬ್ಬರು ರಕ್ಷಿಸಿದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದಿದೆ.

ಚಾಂತಾರು ಎಂಬಲ್ಲಿ ಮಾನಸಿಕ ಅಸ್ವಸ್ಥ ಮಗನ ಉಪಟಳ, ಹಾಗೂ ಉಗ್ರ ವರ್ತನೆಯ ಭೀತಿಯಿಂದ ತಾಯಿ ಗುಲಾಬಿ ಶೆಟ್ಟಿ(80)ಹಾಗೂ ಮಗಳು ವಾರಿಜ ಶೆಟ್ಟಿ (50) ಕಳೆದ ಏಳು ವರ್ಷಗಳಿಂದ ವಿದ್ಯುತ್ ಸಂಪರ್ಕವೂ ಇಲ್ಲದ ಮನೆಯಲ್ಲಿ ವಾಸಿಸುತ್ತಿದ್ದರು. ಪರಊರಿನಲ್ಲಿರುವ ಸಂಬಂಧಿಯೋರ್ವರು ಇವರಿಗೆ ದಿನಸಿ ಸಾಮಾಗ್ರಿಗಳನ್ನು ಒದಗಿಸುತ್ತಿದ್ದರು, ಆದರೆ ಅದನ್ನು ಕೂಡಾ ಸರಿಯಾಗಿ ಬಳಸಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ.

ಏಳು ವರ್ಷಗಳಿಂದ ಮನೆ ಬಿಟ್ಟು ಹೊರಗಿನ ಸಂಪರ್ಕವೇ ಇವರಿಗೆ ಇರಲಿಲ್ಲ. ಹೀಗಿರುವ ವಿಷಯ ತಿಳಿದ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಸ್ಥಳೀಯರ ಸಹಕಾರದಿಂದ ಮೂವರ ರಕ್ಷಣೆ ಮಾಡಿದ್ದಾರೆ. ಮಾನಸಿಕ ಅಸ್ವಸ್ಥನನ್ನು ಆಸ್ಪತ್ರೆಗೆ ದಾಖಲು ಪಡಿಸಿದ್ದು, ತಾಯಿ ಮತ್ತು ಮಗಳಿಗೆ ನಿಟ್ಟೂರಿನಲ್ಲಿರುವ ಸಖಿ ಒನ್ ಸ್ಟಾಪ್ ಸೆಂಟರಿನಲ್ಲಿ ತಾತ್ಕಾಲಿಕ ಆಶ್ರಯ ಒದಗಿಸಿದ್ದಾರೆ.ಸಮಾಜ ಸೇವಕ ವಿಶು ಶೆಟ್ಟಿಯವರ ಈ ಮಾನವೀಯ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.

Edited By : Shivu K
Kshetra Samachara

Kshetra Samachara

28/08/2021 12:50 pm

Cinque Terre

21.37 K

Cinque Terre

6

ಸಂಬಂಧಿತ ಸುದ್ದಿ