ಉಡುಪಿ: ಶ್ರೀಕೃಷ್ಣ ದೇವರ ದರ್ಶನ ಪಡೆಯಲು ಬಂದಿರುವ, ಹೊರರಾಜ್ಯದ ಯಾತ್ರಾರ್ಥಿಯೊರ್ವರು ಮಾನಸಿಕ ಸ್ಥಿರತೆ ಕಳೆದುಕೊಂಡು, ಅರೆನಗ್ನತೆಯಲ್ಲಿ ರಥಬೀದಿಯಲ್ಲಿ ಸಂಚರಿಸುತ್ತಿದ್ದರು. ಮಠದ ಸಿಬ್ಬಂದಿಗಳ ಸಹಕಾರದಿಂದ, ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಯಾತ್ರಾರ್ಥಿಯನ್ನು ರಕ್ಷಿಸಿದ್ದರು. ಬಳಿಕ ಮಣಿಪಾಲ ಹೊಸಬೆಳಕು ಆಶ್ರಮದಲ್ಲಿ ದಾಖಲುಪಡಿಸಿದ್ದರು.
ಈ ಘಟನೆ ಕಳೆದ ಶುಕ್ರವಾರ ನಡೆದಿತ್ತು. ಈ ಬಗ್ಗೆ ಹೊಸಬೆಳಕು ಆಶ್ರಮದ ಸಂಚಾಲಕ ವಿನಯಚಂದ್ರ ಸಾಸ್ತಾನ ಅವರು, ಯಾತ್ರಾರ್ಥಿಯ ವಿಳಾಸವನ್ನು ಪತ್ತೆಗೊಳಿಸಿ ಸಂಬಂಧಿಕರಿಗೆ ವಿಷಯ ಮುಟ್ಟಿಸಿದ್ದರು. ಸೋಮವಾರ ತಮಿಳುನಾಡಿನ ಮಧುರೈಯಿಂದ ಬಂದು, ಮಣಿಪಾಲದ ಆಶ್ರಮವನ್ನು ಸಂಪರ್ಕಿಸಿದ, ಪತ್ನಿ ಮತ್ತು ಸಂಬಂಧಿಕರು, ಆಶ್ರಮ ರಕ್ಷಣೆಯಲ್ಲಿದ್ದ ಯಾತ್ರಾರ್ಥಿಯನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಆಶ್ರಮದ ಸಂಚಾಲಕಿ ತನುಲಾ ತರುಣ್ ಅವರು ಯಾತ್ರಾರ್ಥಿಗೆ ಆಶ್ರಯ ಮತ್ತು ಊಟೋಪಚಾರ ಒದಗಿಸಿ ಮಾನವೀಯತೆ ತೋರಿದರು.
Kshetra Samachara
23/08/2021 09:54 pm