ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು :75ನೇ ಸ್ವಾತಂತ್ರೋತ್ಸವ ದಿನದಂದು ಮನೆ ನಿರ್ಮಿಸಿಕೊಟ್ಟ ಯುವ ಉದ್ಯಮಿ ಗೋವಿಂದ ಬಾಬು ಪೂಜಾರಿ .

ವರದಿ :ದಾಮೋದರ ಮೊಗವೀರ ನಾಯಕವಾಡಿ .

ಬೈಂದೂರು :ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ .ಇದರ ಮಾಲೀಕರಾದ ಯುವ ಉದ್ಯಮಿ ಗೋವಿಂದ ಬಾಬು ಪೂಜಾರಿ ಯವರು 75ನೇ ಸ್ವಾತಂತ್ರೋತ್ಸವ ದಿನವಾದ ಇಂದು ತ್ರಾಸಿ ಸಮೀಪದ ಕಂಚುಗೋಡು ಭರತ್ ನಗರದ ನಿವಾಸಿಯಾದ ಶ್ರೀಮತಿ ಪುಷ್ಪಾ ಉಲ್ಲಾಸ್ ಖಾರ್ವಿ ದಂಪತಿಗಳಿಗೆ ಇಂದು (ಅಗಸ್ಟ್ 15)ರಂದು ನೂತನ ಮನೆಯನ್ನು ಆಶ್ರಯದಾತ ಕೊಡುಗೈ ದಾನಿ ಯುವ ಉದ್ಯಮಿ ಗೋವಿಂದ ಬಾಬು ಪೂಜಾರಿಯವರು ಮನೆ ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ .

ಹೌದು ಉಪ್ಪುಂದ ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ ಶೈಕ್ಷಣಿಕ ಸಾಮಾಜಿಕ ಹಾಗೂ ಅನ್ನ ಆಶ್ರಯ ಜನಸೇವೆ ಸಂಸ್ಥೆಯಾಗಿರುತ್ತದೆ .ಹೌದು ತ್ರಾಸಿ ಸಮೀಪದ ಪುಷ್ಪಾ ಉಲ್ಲಾಸ್ ಖಾರ್ವಿ ದಂಪತಿಗಳು ಕಡು ಬಡವರಾಗಿದ್ದು ಸೂರು ಇಲ್ಲದೆ ಆಶ್ರಯ ವಂಚಿತರಾಗಿದ್ದು ಇವರ ಅಸಹಾಯಕತೆ ಅರಿತ ಸದಾಶಿವ್ ಖಾರ್ವಿ ಕಂಚುಗೋಡು ಸೇವಾ ಸಂಕಲ್ಪ ಸೇವಾ ಸಂಸ್ಥೆಯವರು ತಕ್ಷಣ ಗೋವಿಂದ ಬಾಬು ಪೂಜಾರಿ ಯವರ ಗಮನಕ್ಕೆ ತಂದು ಸ್ವತಃ ಸ್ಥಳಕ್ಕೆ ಭೇಟಿ ಕೊಟ್ಟು ಬಡ ಕುಟುಂಬದ ಕಷ್ಟ ಅರಿತು ಇಂದು ಅಗಸ್ಟ್ (15) 75ನೇ ಸ್ವಾತಂತ್ರ್ಯೋತ್ಸವ ದಿನದ ಶುಭ ಸಂದರ್ಭದಲ್ಲಿ "ಶ್ರೀ ವರಲಕ್ಷ್ಮಿ ನಿಲಯ " ಗೃಹಪ್ರವೇಶ ನೆರವೇರಿಸಿ ಮನೆಯ ಕೀ ಯನ್ನು ಫಲಾನುಭವಿಗಳಿಗೆ ಕೈಗೆ ಹಸ್ತಾಂತರ ಮಾಡಿದರು .

ಇಂದು ಗೋವಿಂದ ಬಾಬು ಪೂಜಾರಿಯವರ ಪೂರ್ಣ ವೆಚ್ಚದಲ್ಲಿ ಸಂಪೂರ್ಣ ಸುಸಜ್ಜಿತ ಮನೆ ನಿರ್ಮಿಸಿಕೊಟ್ಟು ಇಂದು ಇದು "ನಾಲ್ಕನೇ" ಮನೆ ಇದಾಗಿದ್ದು ಶ್ರೀ ವರಲಕ್ಷ್ಮೀ ನಿಲಯದ ಗೃಹ ಪ್ರವೇಶೋತ್ಸವ ಈ ಶುಭ ಸಮಯದಲ್ಲಿ ಪುಷ್ಪಾ ಉಲ್ಲಾಸ್ ದಂಪತಿಗಳ ಮನೆಯವರು ಗೋವಿಂದ ಬಾಬು ಪೂಜಾರಿ ಯವರ ಮಾತಾ ಪಿತರು ಹಾಗೂತ್ರಾಸಿ ಸಮೀಪದ ಭಗತ್ ನಗರ್ ಕಾಲೋನಿಯ ನಿವಾಸಿಗಳು ಹಾಗೂ ಅಭಿಮಾನಿ ಬಳಗ ಉಪಸ್ಥಿತರಿದ್ದರು .

ಈ ಸಂದರ್ಭದಲ್ಲಿ ಹಲವು ಬಡ ಕುಟುಂಬಗಳಿಗೆ ಆಶ್ರಯದಾತ ರಾಗಿರುವ ಗೋವಿಂದ ಬಾಬು ಪೂಜಾರಿಯವರು ಮಾಧ್ಯಮಗಳ ಜೊತೆ ಮಾತನಾಡುತ್ತ .ನಮ್ಮ ಟ್ರಸ್ಟ್ ವತಿಯಿಂದ ನಿರ್ಮಿಸಿಕೊಟ್ಟ ನಾಲ್ಕನೇ ಮನೆ ಇದಾಗಿದ್ದು ಶ್ರೀ ವರಲಕ್ಷ್ಮೀ ಚಾರಿಟೆಬಲ್ ಟ್ರಸ್ಟ್ ವತಿಯಿಂದ 5 ನೇ ಮನೆಯ ನಿರ್ಮಾಣ ಕಾರ್ಯ ಪ್ರಗತಿ ಹಂತದಲ್ಲಿದ್ದು . ಕುಂದಾಪುರ ಸಮೀಪ ಕಾಳಾವರದ ಒಂದು ಕಡು ಬಡತನದಲ್ಲಿರುವ ಕುಟುಂಬವೊಂದಕ್ಕೆ ಬರುವ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಗೃಹ ಪ್ರವೇಶ ಕಾರ್ಯಕ್ರಮ ಹಮ್ಮಿ ಕೊಂಡಿದ್ದೇವೆಂದು ತಿಳಿಸಿದರು.ಹಾಗೆಯೇ ಗೋವಿಂದ ಬಾಬು ಪೂಜಾರಿಯವರು ಈ ಸೇವೆ ತೀರಾ ಬಡವರಿಗೆ ಸೂರು ಇಲ್ಲದವರಿಗೆ ಇನ್ನೂ ವರ್ಷಕ್ಕೆ 2 ಮನೆ ನಿರ್ಮಾಣ ಮಾಡಿಕೊಡುವ ಸಂಕಲ್ಪ ಮಾಡಿರುವುದರ ಬಗ್ಗೆ ತಿಳಿಸಿದ್ದಾರೆ .

ಇಂತಹ ಸಂಕಷ್ಟದ ದಿನದಲ್ಲಿ ಸೂರು ಇಲ್ಲದ ನಿರಾಶ್ರಿತರನ್ನು ಹುಡುಕಿ ಮನೆ ನಿರ್ಮಿಸಿ ಕೊಡುವ ಗೋವಿಂದ ಬಾಬು ಪೂಜಾರಿಯವರ ಈ ಸಂಕಲ್ಪಕ್ಕೆ ನೆಟ್ಟಿಗರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದರು .

Edited By : Manjunath H D
Kshetra Samachara

Kshetra Samachara

15/08/2021 09:11 pm

Cinque Terre

36.03 K

Cinque Terre

5

ಸಂಬಂಧಿತ ಸುದ್ದಿ