ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಪೆ : ಬಂದರಿನಲ್ಲಿ ಲಂಗರು ಹಾಕಿದ್ದ ನೀರಿನ ರಭಸಕ್ಕೆ ಸಮುದ್ರ ಪಾಲಾದ ಎರಡು ಬೋಟ್ ಗಳ ದುರಂತ ತಪ್ಪಿಸಿದ ಈಶ್ವರ್ ಮಲ್ಪೆ

ಬೈಂದೂರು :ಉಡುಪಿ ಮಲ್ಪೆ ಬಂದರಿನಲ್ಲಿ ಲಂಗರು ಹಾಕಿದ್ದ ಎರಡು ಬೋಟುಗಳು ಸಮುದ್ರ ಕಡಲ ತೆರೆಗಳ ಅಬ್ಬರಕ್ಕೆ ಬೋಟಿನ ಹಗ್ಗ ತುಂಡಾಗಿ ಸಮುದ್ರ ಪಾಲಾದ ಬೋಟ್ ಗಳು ಸೇಂಟ್ ಮೇರಿಸ್ ಹೈಲ್ಯಾಂಡ್ ಕಲ್ಲಿನ ಬಳಿ ಯಾರೊಬ್ಬರೂ ಮೀನಿಗೆ ಗಾಳ ಹಾಕುವವರು ದುರಂತಕ್ಕೀಡಾಗಿರುವ ಬೋಟುಗಳನ್ನು ಗಮನಿಸಿದ ತಕ್ಷಣ ಫೋನ್ ಕರೆಯ ಮುಖಾಂತರ ಆಪದ್ಬಾಂಧವ ಈಶ್ವರ್ ಮಲ್ಪೆ ಯವರಿಗೆ ತಿಳಿಸಿದ್ದಾರೆ .

ವಿಷಯ ತಿಳಿದ ತಕ್ಷಣ ಕಾರ್ಯಾಚರಣೆಗೆ ಮುಂದಾದ ಈಶ್ವರ್ ಮಲ್ಪೆ ಹಾಗೂ ಜಮೀರ್ ಕಲ್ಮಾಡಿ ಹಾಗೂ ತಂಡದವರು ಸಮುದ್ರದಲ್ಲಿನ ಕಲ್ಲಿನ ಬಳಿ ತೆರಳಿ ಸಮುದ್ರ ಪಾಲಾಗುತ್ತಿದ್ದ ಎರಡು ಬೋಟುಗಳನ್ನು ಉಮೇಶ್ ಪಡುಕೆರೆ ತಂಡದ ಸಹಾಯದ ಮೂಲಕ ಸುರಕ್ಷಿತವಾಗಿ ಬೋಟುಗಳನ್ನು ಮಲ್ಪೆ ಬಂದರಿಗೆ ತಂದು ಮಾಲೀಕರಿಗೆ ಒಪ್ಪಿಸಿದ್ದಾರೆ .

ಇಂತಹ ಕಾರ್ಯಾಚರಣೆಯಿಂದ 2 ಕೋಟಿಗೂ ಮಿಕ್ಕಿ ನಷ್ಟವನ್ನು ಈಶ್ವರ್ ಮಲ್ಪೆ ಮತ್ತು ತಂಡದವರು ತಪ್ಪಿಸಿದ್ದಾರೆ.

ಹೌದು ಈ ಘಟನೆಆಗಸ್ಟ್14 ರ ಬೆಳಗಿನ ಜಾವ 4ಗಂಟೆಗೆ ನಡೆದಿದೆ . ಈಶ್ವರ್ ಮಲ್ಪೆ ಮತ್ತು ತಂಡದವರಿಗೆ ಈ ಕಾರ್ಯಾಚರಣೆಗೆ ಸಾರ್ವಜನಿಕರು ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ .

ವರದಿ :ದಾಮೋದರ ಮೊಗವೀರ ನಾಯಕವಾಡಿ

Edited By : Nagesh Gaonkar
Kshetra Samachara

Kshetra Samachara

14/08/2021 07:08 pm

Cinque Terre

12.13 K

Cinque Terre

1

ಸಂಬಂಧಿತ ಸುದ್ದಿ