ಮುಲ್ಕಿ: ಯಕ್ಷಗಾನ ರಂಗದ ಭೀಷ್ಮ ಎಂದೇ ಖ್ಯಾತಿಯ ಮುಲ್ಕಿ ಸಮೀಪದ ಅತಿಕಾರಿಬೆಟ್ಟು ವಿನ ಗಣೇಶ್ ಕೊಲಕಾಡಿ ತೀವ್ರ ಅನಾರೋಗ್ಯದಲ್ಲಿದ್ದು ಸಹಾಯ ಹಸ್ತ ನೀಡುವಂತೆ ಪಬ್ಲಿಕ್ ನೆಕ್ಸ್ಟ್ ಸಹಿತ ಅನೇಕ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದ್ದು ಕೂಡಲೇ ಅನೇಕ ಯಕ್ಷಗಾನ ಅಭಿಮಾನಿಗಳಿಂದ ಹಾಗೂ ಗಣೇಶ ಕೊಲಕಾಡಿ ಶಿಷ್ಯರಿಂದ ಸ್ಪಂದನೆ ವ್ಯಕ್ತವಾಗಿದೆ.
ಗುರುವಾರ ಗಣೇಶ ಕೊಲಕಾಡಿ ಅಭಿಮಾನಿ ಬಳಗದ ವಿ-ಆರ್ ಫ್ರೆಂಡ್ಸ್ ಮುಂಬೈ - ಮುಂಡ್ಕೂರ್ ವಾಟ್ಸಪ್ ಬಳಗದ ಸದಸ್ಯರಾದ ರತ್ನಾಕರ ಶೆಟ್ಟಿ.,ಹರೀಶ್ ಶೆಟ್ಟಿ.,ಅಶೋಕ್ ಶೆಟ್ಟಿ,ಸುರೇಶ್ ಶೆಟ್ಟಿ.ಮೋಹನ್ ಶೆಟ್ಟಿ..ನರಸಿಂಹ ಶೆಟ್ಟಿ.,ಉಷಾ ವಿ ಶೆಟ್ಟಿ,ಆಶಾಲತಾ ಎಸ್ ಶೆಟ್ಟಿ.ಆಶಾ ಕುಮಾರಿ,ಸುಜಾತಾ ಶೆಟ್ಟಿ,ಶೈಲಜಾ ಶೆಟ್ಟಿ,ಕೀರ್ತನಾ ಶೆಟ್ಟಿ,ಪ್ರಾರ್ಥನಾ ಶೆಟ್ಟಿ ಸಹಕಾರದೊಂದಿಗೆ ಮುಂಡ್ಕೂರಿನ ಶಿಕ್ಷಕ ಸಾಯಿನಾಥ ಶೆಟ್ಟಿ ನೇತೃತ್ವದಲ್ಲಿ ಗಣೇಶ್ ಕೊಲಕಾಡಿ ಮನೆಗೆ ಭೇಟಿ ನೀಡಿ ಸಹಾಯ ಹಸ್ತ ನೀಡಲಾಯಿತು.
ಈ ಸಂದರ್ಭ ಶಿಕ್ಷಕ ಸಾಯಿನಾಥ ಶೆಟ್ಟಿ ಯವರು ಯಕ್ಷರಂಗದ ಬೀಷ್ಮ ಗಣೇಶ್ ಕೊಲಕಾಡಿ ಆರೋಗ್ಯವನ್ನು ವಿಚಾರಿಸಿ ಬೇಗ ಗುಣಮುಖರಾಗುವಂತೆ ಶುಭ ಹಾರೈಸಿದರು.ಹಾಗೂ ಮುಂದಿನ ದಿನಗಳಲ್ಲಿ ಕಿನ್ನಿಗೋಳಿ ರೋಟರಿ ಕ್ಲಬ್ ಮತ್ತಿತರ ಸಂಘಟನೆಗಳೊಂದಿಗೆ ಮತ್ತಷ್ಟು ಸಹಾಯಹಸ್ತ ನೀಡಲು ಪ್ರಯತ್ನಿಸುವುದಾಗಿ ತಿಳಿಸಿದರು.
ಈ ಸಂದರ್ಭ ಗಣೇಶ್ ಕೊಲಕಾಡಿ ಮಾತನಾಡಿ ನಾನು ತೀವ್ರ ಅನಾರೋಗ್ಯ, ಬಡತನದ ಸ್ಥಿತಿಯಲ್ಲಿದ್ದು ಸಹಾಯ ಹಸ್ತಕ್ಕಾಗಿ ಧನ್ಯವಾದ ಅರ್ಪಿಸಿದರು.
ಮಾತೃಶ್ರೀ ಪದ್ಮಾವತಿ, ಪತ್ರಕರ್ತ ಪುನೀತ್ ಕೃಷ್ಣ ಮತ್ತಿತರರು ಇದ್ದರು
Kshetra Samachara
12/08/2021 04:34 pm