ಮುಲ್ಕಿ: ಹಳೆಯಂಗಡಿಯ ಒಳ ರಸ್ತೆ ಪಿಸಿಎ ಬ್ಯಾಂಕ್ ಎದುರುಗಡೆ ರಸ್ತೆಯಲ್ಲಿ ಭಾನುವಾರ ಸಂಜೆ 6 ಗಂಟೆಯ ಸಮಯದಲ್ಲಿ ಹಳೆಯಂಗಡಿಯ ನಿವಾಸಿ ಸದಾನಂದ ಪಾಲನ್ ಅವರಿಗೆ ರಸ್ತೆಯಲ್ಲಿ ಬಿದ್ದು ಸಿಕ್ಕಿದ ಹಣವನ್ನು ವಾರಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಹಳೆಯಂಗಡಿಯ ಸದಾನಂದ ಪಾಲನ್ ಅವರಿಗೆ ರಸ್ತೆಯಲ್ಲಿ ಬಿದ್ದಿ 42,000 ರೂ.ವನ್ನು ಕಟ್ಟು ಸಿಕ್ಕಿತ್ತು. ಅವರು ಅದನ್ನು ತೆಗೆದುಕೊಂಡು ಪರಿಶೀಲಿಸಿ ಮಾಹಿತಿ ಪಡೆದಾಗ ಸ್ಥಳೀಯ ಶ್ರೀ ಗುರು ಹೋಟೆಲ್ ಮಾಲೀಕ ಎಚ್ ರಮೇಶ್ ಸಾಲಿಯಾನ್ ಅವರು ರೇಷನ್ ಅಂಗಡಿಗೆ ಪಾವತಿಸಲು ಇಟ್ಟ ಹಣ ಕಳೆದುಕೊಂಡಿದ್ದಾರೆ ಎಂದು ತಿಳಿದಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಸದಾನಂದ ಅವರು ಹಣ ಕಳೆದುಕೊಂಡ ರಮೇಶ್ ಸಾಲ್ಯಾನ್ ಅವರನ್ನು ಸಂಪರ್ಕಿಸಿ ಪೂರ್ತಿ ಹಣವನ್ನು ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಅಭಿನಂದನೆ ವ್ಯಕ್ತವಾಗಿದೆ.
Kshetra Samachara
01/08/2021 10:31 pm