ಮುಲ್ಕಿ: ಪಕ್ಷಿಕೆರೆ ಯುವಕ ಪ್ರತಾಪ್ ಆಚಾರ್ಯ ರವರು ಕೊರೊನ ಲಾಕ್ ಡೌನ್ ಸಮಯದಲ್ಲಿ ವಿಶಿಷ್ಟ ರೀತಿಯ ಕಲೆ ಲೀಫ್ ಆರ್ಟ್ ನ್ನು ಕರಗತ ಮಾಡಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ
ಕೊರೊನ ಲಾಕ್ ಡೌನ್ ದಿನಗಳಲ್ಲಿ ಸಮಯ ವ್ಯರ್ಥ ಮಾಡದೆ ಎಲೆಗಳಲ್ಲಿ ರಾಷ್ಟ್ರದ ಮಹಾನುಭಾವ ನಾಯಕರಾದ ಸ್ವಾಮಿ ವಿವೇಕಾನಂದ, ಕ್ರಿಕೆಟ್ ಆಟಗಾರ ಎಂ ಎಸ್ ಧೋನಿ, ಮಾಜಿ ರಾಷ್ಟ್ರಪತಿಗಳಾದ ಅಬ್ದುಲ್ ಕಾಲಂ, ಖ್ಯಾತ ಗಾಯಕ ಎಸ್ಪಿ ಬಾಲಸುಬ್ರಮಣ್ಯ, ಖ್ಯಾತ ಯಕ್ಷಗಾನ ಕಲಾವಿದ ಪಟ್ಲ ಸತೀಶ್ ಶೆಟ್ಟಿ ರವರ ಲೀಫ್ ಹಾರ್ಟ್ ರಚಿಸಿ ಸೈ ಎನಿಸಿ ಕೊಂಡಿದ್ದರು.
ಇದೀಗ ಕರ್ನಾಟಕ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರ ತದ್ರೂಪಿ ಚಿತ್ರವನ್ನು ಲೀಫ್ ಆರ್ಟ್ ಲ್ಲಿ ನಿರ್ಮಿಸಿ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದು ಸಖತ್ತಾಗಿ ಮುಖ್ಯಮಂತ್ರಿಯವರ ತದ್ರೂಪದ ಲೀಫ್ ಆರ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ವ್ಯಾಪಕ ಅಭಿನಂದನೆ ವ್ಯಕ್ತವಾಗಿದೆ.
ಪಕ್ಷಿಕೆರೆ ಸದಾಶಿವ ವೇದಾವತಿ ಆಚಾರ್ಯರ ಪುತ್ರನಾಗಿರುವ ಪ್ರತಾಪ್ ಆಚಾರ್ಯ ಕಿನ್ನಿಗೋಳಿ ಮೇರಿ ವೆಲ್ ಶಾಲೆಯಲ್ಲಿ ಹತ್ತನೇ ತರಗತಿ ಮುಗಿಸಿ ಕಟೀಲು ಕಾಲೇಜಿನಲ್ಲಿ ಪಿಯುಸಿ ಮುಗಿಸಿ ಇದೀಗ ಗ್ರಾಫಿಕ್ ಡಿಸೈನ್ ಕೋರ್ಸ್ ಮಾಡುತ್ತಿದ್ದು ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದಾನೆ.
Kshetra Samachara
31/07/2021 09:52 am