ವರದಿ: ಸಂದೇಶ್ ಶೆಟ್ಟಿ ಆಜ್ರಿ ಪಬ್ಲಿಕ್ ನೆಕ್ಸ್ಟ್ ಉಡುಪಿ
ಉಡುಪಿ: ಪ್ರಾಮಾಣಿಕತೆಗೆ ಇನ್ನೊಂದು ಹೆಸರೇ ಶ್ವಾನ.. ಮನುಷ್ಯರಿಗೂ ಶ್ವಾನಕ್ಕೂ ಅವಿನಾಭಾವ ಸಂಬಂಧ. ಶ್ವಾನದಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತೆ ಅಂತಾ ಮಾಜಿ ಸೈನಿಕರೊಬ್ಬರು ಅಪರೂಪದಲ್ಲೇ ಅಪರೂಪದ ತಳಿಯ ಶ್ವಾನಗಳನ್ನು ಸಾಕುತ್ತಿದ್ದಾರೆ.. ಮಿನಿ ಝೂನಂತಿರುವ ಇವರ ಮನೆಗೆ ಒಂದ್ ರೌಂಡ್ ಹಾಕೋಣ ಬನ್ನಿ
ರಾಕ್ವಾರ್, ಅಮೇರಿಕಾನ್ ಬುಲ್ಲಿ ಸೈಬೀರಿಯನ್ ಹಸ್ಕಿ ಹೀಗೆ ದೈತ್ಯಾಕಾರ ಶ್ವಾನಗಳು, ಅಪರೂಪದ 13 ತಳಿಯ ೧೫ ಶ್ವಾನಗಳು.. ಇಷ್ಟೇ ಅಲ್ಲ ವಿವಿಧ ತಳಿಯ ಬೆಕ್ಕುಗಳು, ಮೊಲ, ಪಕ್ಷಿಗಳು ಆಮೆ, ಮೀನುಗಳು ಎಲ್ಲ ಮನೆಯಲ್ಲಿ ಇದೆ. ಚಿಕ್ಕ ಜೂ ನಂತಿದೆ ಈ ಮನೆ.. ಇವುಗಳನ್ನು ಸಾಕಿ ಸಲುಹುತ್ತಿರುವವರು ಉಡುಪಿ ಕಡೇಕಾರ್ ನಿವಾಸಿ ನವೀನ್ .. ಮಾಜಿ ಸೈನಿಕರು.. ೧೧ ವರ್ಷಗಳ ಕಾಲ ಸೈನ್ಯದಲ್ಲಿ ಸೇವೆ ಸಲ್ಲಿಸಿದ ಇವರಿಗೆ ಆರೋಗ್ಯ ಸಮಸ್ಯೆ ಎದುರಾದಾಗ ಸ್ವಯಂ ನಿವೃತ್ತಿ ಪಡೆದ್ರು.. ಊರಿಗೆ ಬಂದ ಇವರು ನೆಮ್ಮದಿಗಾಗಿ ಕಳೆದ ಕೆಲವು ವರ್ಷಗಳಿಂದ ಶ್ವಾನ ಸಾಕುವ ಕೆಳೆದ ಹವ್ಯಾಸ ರೂಢಿಸಿಕೊಂಡರು. ಕೆಲವು ಹಣ ಕೊಟ್ಟು ಮಾಡಿದ್ರು. ಇನ್ನು ಕೆಲವು, ಇತರರ ಮನೆಯಲ್ಲಿ ಸಾಕಲು ಕಷ್ಟವಾಗುವ ಶ್ವಾನಗಳನ್ನು ಕೂಡ ನವೀನ್ ತಂದು ಸಾಕುತ್ತಿದ್ದಾರೆ..
ಇವುಗಳ ಲಾಲನೆ ಪಾಲನೆ ನವೀನ್ ಅವರೇ ಮಾಡುತ್ತಿದ್ದು, ಆಹಾರ ಮೆಡಿಸಿನ್ ಅಂತ ದಿನಕ್ಕೆ ಕಡಿಮೆ ಅಂದ್ರೂ ಒಂದು ಸಾವಿರದಷ್ಟು ಖರ್ಚು ಇದೆ. ಇದನ್ನು ಸ್ವಂತ ಉದ್ಯಮದಿಂದ ಬಂದ ಹಣವನ್ನು ಇದಕ್ಕಾಗಿ ವಿನಿಯೋಗ ಮಾಡುತ್ತಿದ್ದಾರೆ.. ಶ್ವಾನ ಅಷ್ಟೇ ಅಲ್ಲ ಬೆಕ್ಕುಗಳು ಮೊಲ, ಪಕ್ಷಿಗಳು ಆಮೆ ಕೂಡ ಇವರ ಮನೆಯಲ್ಲಿ ಇದೆ.. ನವೀನ್ ಅವ್ರ ಈ ವಿಶೇಷ ಹವ್ಯಾಸಕ್ಕೆ ಮನೆ ಮಂದಿಯ ಪುಲ್ ಸಪೋರ್ಟ್ ಕೂಡ ಇದೆ.
ಅಂದ ಹಾಗೆ, ಎಲ್ಲವನ್ನೂ ವ್ಯವಸ್ಥಿತವಾಗಿ ನಿರ್ವಹಣೆ ಮಾಡವ ನವೀನ್ ಅವರ ಮನೆಗೆ ನೀವು ಕೂಡ ಭೇಟಿ ನೀಡಿ ಅಪರೂಪದ ಶ್ವಾನಗಳನ್ನು ಉಚಿತವಾಗಿ ವೀಕ್ಷಣೆ ಮಾಡಬಹುದು, ಶ್ವಾನ ಖರೀದಿ ಮಾಡೋದಿದ್ರೆ ಇವರಿಂದ ಸಜೇಷನ್ ಕೂಡ ಕೊಡ್ತಾರೆ ನವೀನ್..
Kshetra Samachara
24/02/2021 08:58 am