ಮಲ್ಪೆ: ಈಜು ತರಬೇತಿ ಪಡೆಯುತ್ತಿರುವ 41 ಮಕ್ಕಳು ಏಕಕಾಲದಲ್ಲಿ ಸಮುದ್ರದಲ್ಲಿ ಈಜುವ ಮೂಲಕ ಜನಜಾಗೃತಿ ಮೂಡಿಸಿದ್ದಾರೆ. ಕಾಲಿಗೆ ಸರಪಳಿ ಕಟ್ಟಿ ಪದ್ಮಾಸನ ಭಂಗಿಯಲ್ಲಿ 1.4ಕಿಲೋಮೀಟರ್ ಈಜಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಮಾಡಿ ಸಾಹಸ ಮೆರೆದ ಈಜು ಪಟು ಗಂಗಾಧರ್ ಅವರ ಗರಡಿಯಲ್ಲಿ ಪಳಗಿದ 41ಮಕ್ಕಳು ಏಕಕಾಲದಲ್ಲಿ 3.4ಕಿಲೋಮೀಟರ್ ಈಜಿ ಸಾಹಸ ಮೆರೆದರು.
ಸಮುದ್ರದ ಅಲೆಗಳ ಅಬ್ಬರ, ಜೆಲ್ಲಿ ಫಿಶ್ ಗಳ ಏಟುಗಳನ್ನೆಲ್ಲ ಸಹಿಸಿ ಸೈಂಟ್ ಮೇರಿಸ್ ದ್ವೀಪದಿಂದ ಮಲ್ಪೆ ಪಡುಕೆರೆವರೆಗೆ ಈಜಿ ಸಾಹಸ ಮಾಡುವ ಮೂಲಕ ಈಜು ಕೂಡ ಒಂದು ಅದ್ಬುತ ಕಲೆ ಎಂಬ ಜನಜಾಗೃತಿ ಮೂಡಿಸಿದ್ದಾರೆ.
ಸುಮಾರು 3.4 ಕಿಲೋಮೀಟರ್ ದೂರವನ್ನು 2ಗಂಟೆ 35ನಿಮಿಷದಲ್ಲಿ ದಡ ಸೇರುವ ಮೂಲಕ ಫ್ಯೂಚರ್ ದಾಖಲೆ ವೀರರು ಎಂಬುದನ್ನು ಫ್ರೂವ್ ಮಾಡಿದ್ದಾರೆ ಈ ಪುಟ್ಟ ಮಕ್ಕಳು. ಅಂದಹಾಗೆ ಈಜುಪಟು ಗಂಗಾಧರ್ ಇತ್ತೀಚೆಗಷ್ಟೆ ಪದ್ಮಾಸನ ಭಂಗಿಯಲ್ಲಿ ಅರಬೀ ಸಮುದ್ರದಲ್ಲಿ ಈಜಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡಿದ್ದರು.ಇದೀಗ ಪುಟಾಣಿಗಳು ಅವರ ಗರಡಿಯಲ್ಲಿ ಈಜಿನಲ್ಲಿ ಪಳಗುತ್ತಿದ್ದಾರೆ.
Kshetra Samachara
16/02/2021 01:22 pm