ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನಿರಾಶ್ರಿತರಿಗೆ ಹೊಸಬೆಳಕಿನ ಆಶ್ರಯ ನೀಡಿದ ಮಹಾತಾಯಿಗೆ ಒಡಲೊಳಗೆ ಕ್ಯಾನ್ಸರ್ ಮಹಾಮಾರಿ

ಉಡುಪಿ: ಬದುಕೊಂದು ಬಣ್ಣದ ಲೋಕ ಬದುಕಿನ ಆಳ ಅಂತರದ ಅರಿವಿಲ್ಲದ ಜೀವನ ಕೆಲವೊಮ್ಮೆ ನಶ್ವರ. ಬದುಕಿನ ಹಿನ್ನೋಟ ಮುನ್ನೋಟಗಳ ಒಳಗೆ ಒಂದಿಷ್ಟು ಭಾವನಾತ್ಮಕ ಸಂಬಂಧಗಳು ಅಡಗಿರುತ್ತದೆ. ಆ ಹಿನ್ನೆಲೆಯಲ್ಲಿ ಇಲ್ಲೊಂದು ಮನಕಲಕುವ ಕಥೆ ನಮ್ಮ ಕಣ್ಣೆದುರು ಹಾದುಹೋಗುತ್ತದೆ.

ಉಡುಪಿಯ ಹೃದಯಭಾಗವಾದ ಮಣಿಪಾಲದಲ್ಲಿ ಕರುಳು ಕಿತ್ತು ಬರುವಂತಹ ಮನ ಮಿಡಿಯುವ ಘಟನೆ ನಡೆದಿದೆ.ಇಲ್ಲಿ ಭಾವುಕರಾಗಿ ಮಾತನಾಡುವ ಈ ಇವರು ಹೊಸ ಬೆಳಕು ಆಶ್ರಮದ ಮಹಾತಾಯಿ ಹೆಸರು ತನುಲಾ ತರುಣಿ, ಮೂಲತಃ ಕಾರವಾರದವರಾದ ಇವರು ಬಾಲ್ಯದಿಂದಲೇ ಆಶ್ರಮ ಕಟ್ಟುವ ಬಯಕೆಯನ್ನು ಹೊಂದಿದ್ದರು.

ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ ಇವರಿಗೆ ಯಾವುದೇ ಆರ್ಥಿಕ ತೊಂದರೆಗಳಿರಲಿಲ್ಲ ತಾನು ಶಾಲಾ-ಕಾಲೇಜುಗಳಿಗೆ ಹೋಗುತ್ತಿರಬೇಕಾದರೆ ರೋಡ್ ನಲ್ಲಿ ಭಿಕ್ಷೆ ಬೇಡುವವರು ಹಾಗೂ ನಿರಾಶಿತರನ್ನು ಕಂಡು ಇವರ ಮನ ಕರಗುತ್ತಿತ್ತು, ಮದುವೆಯಾದ ನಂತರ ಅನಾಥಾಶ್ರಮ ಕಟ್ಟಬೇಕೆಂದಿರುವ ಬಯಕೆಯನ್ನು ತನ್ನ ಗಂಡನಲ್ಲಿ ಹೇಳಿಕೊಂಡಾಗ ಅವರು ಸಮ್ಮತಿಸಿದರು ನಂತರ ಮಣಿಪಾಲದಲ್ಲಿ ಇನ್ನೊಬ್ಬ ದಿ ಮನಸ್ಥಿತಿಯ ವ್ಯಕ್ತಿ ಸಮಾಜಸೇವಕ ಪ್ರಾಣಿ ಪ್ರಿಯ ಪ್ರಕೃತಿ ಪ್ರಿಯ ವಿನಯಚಂದ್ರ ಸಾಸ್ತಾನ ಜೊತೆಗೂಡಿ ಹೊಸಬೆಳಕು ಎನ್ನುವ ಒಂದು ಆಶ್ರಮವನ್ನು ಕಟ್ಟುತ್ತಾರೆ. ಅನೇಕ ಸಮಾನಮನಸ್ಕರು ಇವರಿಗೆ ಸಾಥ್ ನೀಡಿ ಹೊಸಬೆಳಕು ಎನ್ನುವ ಒಂದು ಆಶ್ರಮವನ್ನು ಕಟ್ಟಲು ಇವರಿಗೆ ಸಹಕಾರಿಯಾಗುತ್ತದೆ.

ನಂತರದ ಈ ಹೊಸ ಬೆಳಕು ಆಶ್ರಮ ಭಿಕ್ಷುಕರ ತವರುಮನೆಯಾಗಿ ಮಾರ್ಪಡುತ್ತದೆ ಬೀದಿಯಲ್ಲಿ ಸಂಬಂಧಗಳ ಬೆಲೆ ಗೊತ್ತಿಲ್ಲದ ಒಂದಿಷ್ಟು ನಿರಾಶ್ರಿತರಿಗೆ ಹೊಸಬೆಳಕಿನ ಆಶ್ರಮ ಆಶ್ರಯ ನೀಡುತ್ತದೆ, ಸತತ ನಲವತ್ತರಿಂದ ಐವತ್ತು ಜನ ನಿರಾಶ್ರಿತರಿಗೆ ಬೆಳಕಾಗಿ ಅವರ ಹೊಸ ಜೀವನಕ್ಕೆ ದಾರಿ ತೋರಿಸುತ್ತದೆ. ಇಷ್ಟೆಲ್ಲಾ ಮಾಡಿದ ಈ ಮಹಾತಾಯಿ ಇದೀಗ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಇನ್ನೊಂದು ಮನಕಲುಕುವ ವಿಚಾರವೆಂದರೆ ಡಾಕ್ಟರ್ ಇವರಿಗೆ 50 ಭಾಗದಷ್ಟು ಮಾತ್ರ ಭರವಸೆ ನೀಡಿದ್ದಾರೆ, ಇಡೀ ಆಶ್ರಮವೇ ಇದೀಗ ಮೌನವಾಗಿದೆ ತಾಯಿ ಇಲ್ಲದವರಿಗೆ ತಾಯಿ ಅಕ್ಕನಿಲ್ಲದವರಿಗೆ ಅಕ್ಕನಾಗಿ ಸಂಬಂಧಗಳ ಬೆಲೆಯನ್ನು ಮತ್ತೆ ನೀಡಿದಂಥ ಇವರು ಇದೀಗ ಜೀವನದ ಕೊನೆಯ ಹಂತದ ಮೆಟ್ಟಿಲು ಹತ್ತಿರ ಇದ್ದಾರೆ.

ಇದೀಗ ಆಸ್ಪತ್ರೆಗೆ ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದಾರೆ‌ ಆಶ್ರಮದ ತುಂಬಾ ಕಣ್ಣೀರಿನ ಹೊಳೆ ಹರಿಯುತ್ತಿದೆ ಆಶ್ರಮದ ಇನ್ನೊಂದು ಬೆಳಕಿನ ಕಣ್ಣದ ಅಭಿನಯ ಚಂದ್ರ ನನ್ನ ಅಕ್ಕನ ನೆನಸಿ ಬಿಕ್ಕಿಬಿಕ್ಕಿ ಅಳುತ್ತಿರುವುದು ಅವರನ್ನು ಕೂಡ ಕರುಳು ಕಿತ್ತು ಬರುವಂತೆ ಮಾಡುತ್ತದೆ. ಅದೇನೇ ಆಗಲಿ ಇವೆಲ್ಲವನ್ನು ಮೆಟ್ಟಿ ಹೊಸಬೆಳಕು ಮತ್ತೆ ಹೊಸಬೆಳಕಿನ ಮಹಾತಾಯಿ ಯಲ್ಲಿ ಮೂಡಲಿ ಅನ್ನೋದೆ ಪಬ್ಲಿಕ್ ನೆಕ್ಸ್ಟ್ ಆಶಯ.

Edited By : Manjunath H D
Kshetra Samachara

Kshetra Samachara

13/02/2021 09:55 pm

Cinque Terre

22.8 K

Cinque Terre

7

ಸಂಬಂಧಿತ ಸುದ್ದಿ