ಮಂಗಳೂರು: ಕೆಲವು ಪೊಲೀಸ್ ಅಧಿಕಾರಿಗಳು ತಮ್ಮ ಕರ್ತವ್ಯದಿಂದಾಚೆಗೂ ಇತರ ಚಟುವಟಿಕೆಗಳಲ್ಲಿ ಹೆಚ್ಚು ಆ್ಯಕ್ಟಿವ್ ಆಗಿ ಇರ್ತಾರೆ. ಅದರಲ್ಲೂ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಇನ್ನೂ ಹೆಚ್ಚು ಉತ್ಸಾಹ, ಲವಲವಿಕೆಯಿಂದ ಇರ್ತಾರೆ. ಇದಕ್ಕೆ ಈ ವಿಡಿಯೋನೇ ಸದ್ಯದ ಸಾಕ್ಷಿ. ಖಡಕ್ ಐಪಿಎಸ್ ಆಫೀಸರ್ ಶಶಿಕುಮಾರ್ ಅವರು ಮನೆಯಲ್ಲಿ ಚಪಾತಿ ಮಾಡುತ್ತಿರುವ ವಿಡಿಯೋ ಒಂದನ್ನ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ.
ತಾವೇ ಹಿಟ್ಟು ನಾದಿಕೊಂಡು, ತಾವೇ ಲಟ್ಟಿಸಿಕೊಂಡು, ತಾವೇ ಅದನ್ನು ಬೇಯಿಸಿ ತೆಗೆಯುತ್ತಿರುವ ಈ ವಿಡಿಯೋಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಗಾಯನ, ವಿಹಾರ, ಫಿಟ್ನೆಸ್, ಮತ್ತಿತರ ಹವ್ಯಾಸಗಳಲ್ಲೂ ಸದಾ ತೊಡಗಿಸಿಕೊಂಡಿರುವ ಶಶಿಕುಮಾರ್, ಅದರ ವಿಡಿಯೋಗಳನ್ನ ಶೇರ್ ಮಾಡ್ತಾ ಇದ್ರು. ಆದ್ರೆ ಇದೇ ಮೊದಲ ಬಾರಿಗೆ ಅವರು ಮುಗುಳ್ನಗೆಯಿಂದ ಚಪಾತಿ ಮಾಡುತ್ತಿರುವ ದೃಶ್ಯವನ್ನ ಶೇರ್ ಮಾಡಿದ್ದಾರೆ.
Kshetra Samachara
12/02/2021 10:40 am